ಚಂಡೀಗಡ: ರಾಷ್ಟ್ರೀಯ ಕುಸ್ತಿಪಟು ನಿಶಾ ದಹಿಯಾ ಮತ್ತು ಅವರ ಸಹೋದರ ಸೂರಜ್ ಅವರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದಾರೆ.
ಈ ಘಟನೆಯು ಹರಿಯಾಣದ ಸುಶೀಲ್ ಕುಮಾರ್ ರೆಸ್ಲಿಂಗ್ ಅಕಾಡೆಮಿ ಬಳಿ ಇಂದು ನಡೆದಿದೆ. ಈ ದಾಳಿಯಲ್ಲಿ ನಿಶಾ ದಹಿಯಾ ತಾಯಿ ಧನಪತಿ ಅವರು ತೀವ್ರವಾಗಿ ಗಾಯಗೊಂಡಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ. ಪೊಲೀಸರು ನಿಶಾ ದಹಿಯಾ ಮತ್ತು ಅವರ ಸಹೋದರ ಸೂರಜ್ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸೋನೆಪತ್‌ನ ಸಿವಿಲ್ ಆಸ್ಪತ್ರೆಗೆ ಸಾಗಿಸಿದ್ದಾರೆ.
ಪೊಲೀಸರು ಹಂತಕರನ್ನು ಪತ್ತೆ ಹಚ್ಚಲು ಶೋಧಕಾರ್ಯ ನಡೆಸಿದ್ದಾರೆ. ಇದುವರೆಗೂ ಕೊಲೆ ಯಾವ ಕಾರಣಕ್ಕಾಗಿ ಮತ್ತು ಯಾರು ಮಾಡಿದರು ಎನ್ನುವುರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಇತ್ತೀಚೆಗೆ ಸೆರ್ಬಿಯಾದಲ್ಲಿ ನಡೆದ ವರ್ಲ್ಡ್ ಯು-23 ಚಾಂಪಿಯನ್ ಶಿಪ್ ಟೂರ್ನಿಯಲ್ಲಿ 65 ಕೆಜಿ ಮಹಿಳಾ ಕುಸ್ತಿಪಟು ವಿಭಾಗದಲ್ಲಿ ನಿಶಾ ಕಂಚಿನ ಪದಕ ಗೆದ್ದಿದ್ದರು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಕ್ಷೇತ್ರಗಳ ಗಣ್ಯರು ನಿಶಾಗೆ ಶುಭ ಕೋರಿದ್ದರು.
PublicNext
10/11/2021 07:06 pm