ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗಾಗಿ ಬಿಸಿಸಿಐ ಟೀಂ ಇಂಡಿಯಾ ಆಟಗಾರರ ಹೆಸರನ್ನು ಪ್ರಕಟಿಸಿದೆ. ಆದರೆ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಅವರನ್ನು ಕೈಬಿಡಲಾಗಿದೆ.
ಇದೇ ವಿಚಾರವಾಗಿ ಸಂಜು ಸ್ಯಾಮ್ಸನ್ ಆಯ್ಕೆ ಸಮಿತಿ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದ್ದಾರೆ. ಬೌಂಡರಿ ಲೈನ್‌ನಲ್ಲಿ ಅದ್ಭುತ ಫೀಲ್ಡಿಂಗ್ ಮಾಡಿದ ತಮ್ಮ ಫೋಟೊಗಳನ್ನು ಸಂಜು ಸ್ಯಾಮ್ಸನ್ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಯಾವುದೇ ಕ್ಯಾಪ್ಷನ್ ನೀಡಿಲ್ಲ.
ಸಂಜು ಸ್ಯಾಮ್ಸನ್ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ನೆಟ್ಟಿಗರೊಬ್ಬರು, 'ನೀವು ವಿಕೆಟ್ ಕೀಪರ್ ಆಗಿ ಅಲ್ಲದಿದ್ದರೂ ಬ್ಯಾಟರ್ ಆಗಿ ತಂಡದಲ್ಲಿ ಇರಬೇಕಿತ್ತು" ಎಂದು ಹೇಳಿದ್ದಾರೆ. 'ಒಳ್ಳೆಯ ದಿನಗಳು ನಿಮಗಾಗಿ ಕಾಯುತ್ತಿವೆ ಸಹೋದರ. ತಾಳ್ಮೆಯಿಂದಿರಿ' ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
PublicNext
10/11/2021 03:03 pm