ನವದೆಹಲಿ: ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್ ಡೇಲ್ ಸ್ಟೇನ್ ಇಂದು (ನ.9) ಟ್ವೀಟ್ ಮಾಡಿ, 'ಯಾರಾದರೂ ಪ್ರಶ್ನೆಯನ್ನು ಕೇಳುವವರಿದ್ದರೆ ಕೇಳಿ, ನಾನು ಬಿಡುವು ಮಾಡಿಕೊಂಡಿದ್ದೇನೆ ಮಾತನಾಡೋಣ' ಎಂದು ಹೇಳಿದ್ದರು. ಡೇಲ್ ಸ್ಟೇನ್ ಟ್ವೀಟ್ ಮಾಡಿದ್ದೇ ತಡ ಕ್ರಿಕೆಟ್ ಅಭಿಮಾನಿಗಳು ಸಾಲು ಸಾಲು ಪ್ರಶ್ನೆಗಳನ್ನು ಕೇಳಲು ಆರಂಭಿಸಿದರು. ವಿಶ್ವದ ಮೂಲೆಮೂಲೆಗಳಿಂದ ಕೇಳಿ ಬಂದ ಅಭಿಮಾನಿಗಳ ಪ್ರಶ್ನೆಗಳಿಗೆ ಡೇಲ್ ಸ್ಟೇನ್ ಒಂದೊಂದಾಗಿ ಉತ್ತರಗಳನ್ನು ನೀಡಿದ್ದಾರೆ.
ಭಾರತ ಮೂಲದ ಕ್ರಿಕೆಟ್ ಅಭಿಮಾನಿ ಜಯಂತ್ ಕುಮಾರ್ ನಾಥ್ ಎಂಬುವರು ಡೇಲ್ ಸ್ಟೇನ್ ಅವರಿಗೆ "ಈಗಿನ ತಲೆಮಾರಿನಲ್ಲಿ ಯಾವ ಕ್ರಿಕೆಟಿಗ ನಿಮ್ಮ ಬೌಲಿಂಗ್‌ಗೆ ತೊಂದರೆಯನ್ನುಂಟು ಮಾಡಬಹುದು ಎಂದೆನಿಸುತ್ತದೆ" ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಇದಕ್ಕೆ ಮರುಟ್ವೀಟ್ ಮಾಡಿದ ಡೇಲ್ ಸ್ಟೇನ್, "ಕೆ.ಎಲ್.ರಾಹುಲ್" ಎಂಬ ಉತ್ತರವನ್ನು ನೀಡಿದ್ದಾರೆ. ಈ ಮೂಲಕ ಈಗಿನ ತಲೆಮಾರಿನಲ್ಲಿ ಕೆ.ಎಲ್.ರಾಹುಲ್ ಅವರಿಗೆ ಬೌಲಿಂಗ್ ಮಾಡುವುದು ತೀರಾ ಕಷ್ಟ ಎಂಬುದನ್ನು ಡೇಲ್ ಸ್ಟೇನ್ ವ್ಯಕ್ತಪಡಿಸಿದ್ದಾರೆ.
PublicNext
09/11/2021 09:27 pm