ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿವೀಸ್ ವಿರುದ್ಧದ ಸರಣಿಗೆ ಇಂದು ಭಾರತ ತಂಡ ಆಯ್ಕೆ: ಸಂಭಾವ್ಯ 15 ಆಟಗಾರರ ಪಟ್ಟಿ ಇಲ್ಲಿದೆ

ನವದೆಹಲಿ: ಟಿ20 ವಿಶ್ವಕಪ್​ನಿಂದ ಭಾರತ ಕ್ರಿಕೆಟ್ ತಂಡವು ಹೊರಬಿದ್ದಿದ್ದು ತವರಿಗೆ ಹಿಂತಿರುಗಲು ತಯಾರಿ ನಡೆಸುತ್ತಿದೆ. ಇತ್ತ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ನವೆಂಬರ್ 17ರಿಂದ ಪ್ರಾರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ 15 ಆಟಗಾರರ ಹೆಸರನ್ನು ಆಯ್ಕೆ ಮಾಡುತ್ತಿದೆ.

ಕಿವೀಸ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿ ಮತ್ತು ಎರಡು ಪಂದ್ಯಗಳ ಟೆಸ್ಟ್​ ಸರಣಿಗಾಗಿ ಬಿಸಿಸಿಐ ಆಯ್ಕೆ ಸಮಿತಿ ಮಂಗಳವಾರ ಆಟಗಾರರ ಆಯ್ಕೆ ಪ್ರಕ್ರಿಯೆಗಾಗಿ ಸಭೆ ಕರೆದಿದೆ. ಭಾರತದಲ್ಲೇ ನಡೆಯಲಿರುವ ಈ ಸರಣಿಗೆ ಈಗಾಗಲೇ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ತನ್ನ ತಂಡವನ್ನು ಪ್ರಕಟಮಾಡಿದೆ. ಹೀಗಾಗಿ ಬಿಸಿಸಿಐ ಇಂದು ಸಂಜೆಯ ವೇಳೆಗೆ 15 ಆಟಗಾರರ ಭಾರತ ತಂಡವನ್ನು ಸಿದ್ಧ ಪಡಿಸಿ ಘೋಷಣೆ ಮಾಡುವ ಸಾಧ್ಯತೆ ಇದೆ.

ಟೀಂ ಇಂಡಿಯಾ ಸಂಭಾವ್ಯ ತಂಡ: ರೋಹಿತ್ ಶರ್ಮಾ (ನಾಯಕ), ಪೃಥ್ವಿ ಶಾ, ಋತುರಾಜ್ ಗಾಯಕ್ವಾಡ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಆವೇಶ್ ಖಾನ್, ಭುವನೇಶ್ವರ್ ಕುಮಾರ್, ದೀಪಕ್ ಚಹಾರ್, ಯುಜ್ವೇಂದ್ರ ಚಹಾಲ್, ರಾಹುಲ್ ಚಹಾರ್.

Edited By : Vijay Kumar
PublicNext

PublicNext

09/11/2021 06:32 pm

Cinque Terre

30.47 K

Cinque Terre

0

ಸಂಬಂಧಿತ ಸುದ್ದಿ