ದುಬೈ: ಇಂಡಿಯನ್ ಕ್ರಿಕೆಟರ್ ರಿಷಬ್ ಪಂತ್ ಈಗ ಕ್ರಿಕೆಟ್ ಪ್ರೇಮಿಗಳ ಹೃದಯ ಗೆದ್ದಿದ್ದಾರೆ.ನಿನ್ನೆ ದುಬೈನಲ್ಲಿ ನಡೆದ ಇಂಡಿಯಾ ವರ್ಸಸ್ ನಮೀಬಿಯಾ ಪಂದ್ಯದಲ್ಲಿ ಆಕಸ್ಮಿಕವಾಗಿಯೇ ರಿಷಬ್ ಪಂತ್ ಕಾಲಿಗೆ ನಮೀಬಿಯಾ ಪ್ಲೇಯರ್ ಬ್ಯಾಟ್ ತಾಗುತ್ತದೆ. ಆಗ ರಿಷಬ್ ತೋರಿದ ಗೌರವವೇ ಈಗ ಎಲ್ಲರ ಗಮನ ಸೆಳೆಯುತ್ತಿದೆ.
ನಮೀಬಿಯಾ ಆಟಗಾರ ನಿಕೋಲ್ ಲಾಫ್ಟಿನ್ ರನ್ ತೆಗೆಯೋ ಭರದಲ್ಲಿಯೇ ವಿಕೆಟ್ ಕೀಪರ್ ರಿಷಬ್ ಪಂತ್ ಬಳಿ ಓಡಿ ಬರ್ತಾರೆ. ಆಗ ಆಚಾನಕ್ಕಾಗಿಯೇ ನಿಕೋಲ್ ಲಾಫ್ಟಿನ್ ಬ್ಯಾಟ್ ರಿಷಬ್ ಕಾಲಿಗೆ ತಾಗುತ್ತದೆ.ಆಗ ರಿಷಬ್ ಪಂತ್, ಬ್ಯಾಟ್ ಅನ್ನ ಮುಟ್ಟಿ ನಮಸ್ಕರಿಸುತ್ತಾರೆ. ಈ ಒಂದು ದೃಶ್ಯವೇ ಈಗ ಕ್ರಿಕೆಟ್ ಪ್ರೇಮಿಗಳ ಹೃದಯ ಕದ್ದಿದೆ. ವೀಡಿಯೋ ಕೂಡ ವೈರಲ್ ಆಗುತ್ತಿದೆ.
PublicNext
09/11/2021 04:48 pm