ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟಿ20 ಕ್ರಿಕೆಟ್‌ನಲ್ಲಿ ದಾಖಲೆ: 4 ಓವರ್‌ನಲ್ಲಿ ಒಂದೇ ಒಂದು ರನ್ ಕೊಡದ ಮೊದಲ ಬೌಲರ್ ಅಕ್ಷಯ್!

ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿದರ್ಭ ತಂಡದ ಸ್ಪಿನ್ ಬೌಲರ್ ಅಕ್ಷಯ್ ಕರ್ನೇವಾರ್ ವಿನೂತನ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ಮಣಿಪುರ ತಂಡದ ಎದುರು ನಡೆದ ಟಿ20 ಪಂದ್ಯದಲ್ಲಿ ಅಕ್ಷಯ್ ಕರ್ನೇವಾರ್ ಅವರು ತಮ್ಮ ಕೋಟಾದ ನಾಲ್ಕು ಓವರ್ ಬೌಲ್ ಮಾಡಿ ಒಂದೂ ರನ್ ನೀಡಿಲ್ಲ (4-4-0-2). ಅಂದರೆ ನಾಲ್ಕೂ ಓವರ್ ಮೇಡನ್ ಮಾಡಿದ್ದಲ್ಲದೆ 2 ವಿಕೆಟ್ ಗಳಿಸಿ ಈ ಸಾಧನೆಗೈದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ.

ಅಂತರರಾಷ್ಟ್ರೀಯ ಟಿ20 ಅಥವಾ ಐಪಿಎಲ್ ಥರಹದ ಫ್ರಾಂಚೈಸಿಗಳು ನಡೆಸುವ ಲೀಗ್‌ಗಳಲ್ಲಿಯೂ ಸಹ ಯಾರೂ ಈ ಸಾಧನೆ ಮಾಡಿಲ್ಲ. ಭಾರತವು ಮುಂದೆ ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ ಆಡಲಿದ್ದು ಇಂತಹ ಉದಯೋನ್ಮುಕ ಬೌಲರ್‌ಗಳು ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಿದೆ.

Edited By : Vijay Kumar
PublicNext

PublicNext

09/11/2021 04:29 pm

Cinque Terre

25.97 K

Cinque Terre

1

ಸಂಬಂಧಿತ ಸುದ್ದಿ