ದುಬೈ: ಆರ್.ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಬೌಲಿಂಗ್ ದಾಳಿಗೆ ನಲುಗಿದ ನಮೀಬಿಯಾ ತಂಡವು ಟೀಂ ಇಂಡಿಯಾಗೆ 133 ರನ್‌ಗಳ ಗುರಿ ನೀಡಿದೆ.
ಐಸಿಸಿ ಟಿ20 ವಿಶ್ವಕಪ್ನ ಸೂಪರ್-12 ಹಂತದ ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ನಮೀಬಿಯಾ 8 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಲು ಶಕ್ತವಾಯಿತು.
ನಮೀಬಿಯಾ ಪರ ಸ್ಟೀಫನ್ ಬಾರ್ಡ್ 21 ರನ್ ಹಾಗೂ ಡೇವಿಡ್ ವೈಸ್ 26 ರನ್ ಗಳಿಸಿದರು. ಇನ್ನು ಭಾರತ ಪರ ರವೀಂದ್ರ ಜಡೇಜಾ, ಆರ್.ಅಶ್ವಿನ್ ತಲಾ 3 ವಿಕೆಟ್ ಉರುಳಿಸಿದರೆ, ಜಸ್‌ಪ್ರೀತ್ ಬೂಮ್ರಾ ಎರಡು ವಿಕೆಟ್ ಪಡೆದು ಮಿಂಚಿದರು.
PublicNext
08/11/2021 09:06 pm