ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಈಜಲು ಹೋಗಿ ನೀರು ಪಾಲಾದ ಸಹೋದರರು.!

ದಾವಣಗೆರೆ: ಈಜಲು ಕೆರೆಗೆ ಹೋಗಿದ್ದ ಇಬ್ಬರು ಸಹೋದರರು ನೀರುಪಾಲಾದ ದುರ್ಘಟನೆ ಚನ್ನಗಿರಿ ತಾಲ್ಲೂಕಿನ ಬೆಂಕಿಕೆರೆಯಲ್ಲಿ ನಡೆದಿದೆ.

ವಿಜಯ ಕುಮಾರ್- ಪವಿತ್ರಾ ದಂಪತಿ ಪುತ್ರ ನವೀನ್ (13) ಹಾಗೂ ಕುಮಾರ್, ಕವಿತಾ ದಂಪತಿ ಪುತ್ರ ಮಂಜುನಾಥ್ (13) ಸಾವನ್ನಪ್ಪಿದ ಬಾಲಕರು.

ಮೃತ ಬಾಲಕರು ಅಣ್ಣತಮ್ಮಂದಿರ ಮಕ್ಕಳು. ನವೀನ್ ಹಾಗೂ ಮಂಜುನಾಥ್ ಐದಾರು ಬಾಲಕರು ಜೊತೆ ಬೆಂಕಿಕೆರೆಗೆ ಈಜಲು ತೆರಳಿದ್ದರು. ಈಜಲು ಬಾರದೆ ಈ ಇಬ್ಬರು ಬಾಲಕರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೃತ ಬಾಲಕರ ತಂದೆ-ತಾಯಿ, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಚನ್ನಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ಇದಾಗಿದೆ.

Edited By : Vijay Kumar
PublicNext

PublicNext

07/11/2021 07:06 pm

Cinque Terre

34.75 K

Cinque Terre

0