ದುಬೈ: ಟಿ-20 ವಿಶ್ವ ಕಪ್ ಪಂದ್ಯ ರೋಚಕ ಘಟ್ಟ ತಲುಪಿದೆ. ಹೀಗಿರೋವಾಗ ಒಂದು ವೇಳೆ ನ್ಯೂಜಿಲ್ಯಾಂಡ್ ತಂಡ ಅಫ್ಘಾನಿಸ್ತಾನ್ ತಂಡದ ವಿರುದ್ಧ ಸೋತರೇ ಅಲ್ಲಿಗೆ ಇಡೀ ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆಗಳ ಸುರಿಮಳೆನೆ ಸುರಿಯುತ್ತದೆ. ಇದನ್ನ ಯಾರಿಂದಲೂ ತಡೆಯಲು ಸಾಧ್ಯವಾಗೋದೇ ಇಲ್ಲ ಎಂದು ಪಾಕಿಸ್ತಾನ್ ಮಾಜಿ ಕ್ರಿಕೆಟರ್ ಶೋಯೆಬ್ ಅಕ್ತರ್ ಈಗಲೇ ಭವಿಷ್ಯ ನುಡಿದಿದ್ದಾರೆ.
ಭಾರತ ತಂಡ ನಿನ್ನೆ ನಡೆದ ಸ್ಕಾಟ್ಲೆಂಡ್ ವಿರುದ್ಧ ಗೆದ್ದು ಬೀಗಿದೆ.ಇದರಿಂದ ಈಗ ಭಾರತ ತಂಡ ವಿಷಯದಲ್ಲಿ ಲೆಕ್ಕಾಚಾರ ಬದಲಾಗುತ್ತಿದೆ. ಆದರೆ ಇದೇ ವಿಶ್ವ ಕಪ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಅಫ್ಘಾನಿಸ್ತಾನದ ವಿರುದ್ಧ ಸೋತರೆ ಭಾರತ ಸೆಮಿ ಫೈನಲ್ ಪ್ರವೇಶ ಖಚಿತಗೊಳ್ಳುತ್ತದೆ. ಒಂದು ವೇಳೆ ಗೆದ್ದರೆ ಕಿವೀಸ್ ಸೆಮಿ ಫೈನಲ್ ಎಂಟ್ರಿ ಆಗುತ್ತದೆ.
ಶೋಯೆಬ್ ಅಕ್ತರ್ ಈ ಎಲ್ಲ ಲೆಕ್ಕಾಚಾರದ ಬಗ್ಗೆ ತಮ್ಮ ಯುಟ್ಯೂಬ್ ಚಾನೆಲ್ ನಲ್ಲಿಯೇ ಮಾತನಾಡಿದ್ದು,ನನ್ನ ಪ್ರಕಾರ ನ್ಯೂಜಿಲ್ಯಾಂಡ್ ಅತ್ಯುತ್ತಮ ತಂಡವೇ ಆಗಿದೆ.ಹೀಗಾಗಿಯೇ ಈ ತಂಡ ಗೆಲ್ಲದೇ ಇದ್ದರೇ ಸೋಷಿಯಲ್ ಮೀಡಿಯಾದಲ್ಲಿ ಏಳೋ ಪ್ರಶ್ನೆಗಳು ಅಂತಿಂತ ಪ್ರಶ್ನೆಗಳೇ ಅಲ್ಲ ಬಿಡಿ ಎಂದು ಹೇಳಿದ್ದಾರೆ ಶೋಯೆಬ್.
ಉಳಿದಂತೆ ಈ ಪಂದ್ಯದಲ್ಲಿ ಭಾರತವೂ ವಾಪಸ್ ಆಗಿದೆ.ಪಾಕಿಸ್ತಾನದ ವಿರುದ್ಧ ಆಡೋ ಚಾನ್ಸ್ ಕೂಡ ಇದೆ.ಈಗ ಪಂದಾವಳಿ ಕುತೂಹಲದ ಘಟ್ಟಕ್ಕೆ ಬಂದಿದೆ. ಮುಂದೇನಾಗುತ್ತದೆಯೋ ನೋಡಬೇಕು ಅಂದಿದ್ದಾರೆ ಶೋಯೆಬ್ ಅಕ್ತರ್.
PublicNext
06/11/2021 10:14 pm