ದುಬೈ: ದೇಶಕ್ಕಾಗಿ ವಿಶ್ವಕಪ್ ಗೆಲ್ಲುವ ಗುರಿ ಹೊಂದಿದ್ದೇನೆ ಎಂದು ಟೀಂ ಇಂಡಿಯಾ ಆರಂಭಿಕ ಆಟಗಾರ, ಕನ್ನಡಿಗ ಕೆ.ಎಲ್. ರಾಹುಲ್ ಹೇಳಿದ್ದಾರೆ.
ಐಸಿಸಿ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಕೆ.ಎಲ್.ರಾಹುಲ್, "2011ರ ವಿಶ್ವಕಪ್ ಗೆಲುವನ್ನು ನಾನು ಮನೆಯಲ್ಲಿ ವೀಕ್ಷಿಸಿದ್ದೆ. ಭಾರತ ವಿಶ್ವಕಪ್ ಗೆದ್ದಾಗ ನನ್ನ ಚಿಂತನೆಯು ಬದಲಾಯಿತು. ಆ ದಿನದ ಬಳಿಕ ನಾನು ಕೂಡ ಅದನ್ನೇ ಸಾಧಿಸುವ ಛಲ ಹೊಂದಿದ್ದೇನೆ. ನಾನು ನನ್ನ ದೇಶಕ್ಕಾಗಿ ವಿಶ್ವಕಪ್ ಗೆಲ್ಲಲು ಬಯಸುತ್ತೇನೆ. ಒಂದು, ಎರಡು ಅಥವಾ ಮೂರು, ಸಾಧ್ಯವಾದಷ್ಟು ಗೆಲ್ಲಬೇಕು. ವಿಶ್ವಕಪ್‌ನ ಭಾಗವಾಗಿ ಇತಿಹಾಸವನ್ನು ರಚಿಸಬೇಕು" ಎಂದು ಹೇಳಿದ್ದಾರೆ.
PublicNext
05/11/2021 06:43 pm