ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

T20 WC | AUS vs BNG: ಜಂಪಾ ಬೌಲಿಂಗ್ ದಾಳಿಗೆ ನಲುಗಿದ ಬಾಂಗ್ಲಾ- ಆಸೀಸ್ ಗೆ 8 ವಿಕೆಟ್‌ಗಳಿಂದ ಗೆಲುವು

ದುಬೈ: ಆಸ್ಟ್ರೇಲಿಯಾದ ಆ್ಯಡಮ್ ಜಂಪಾ, ಮಿಚೆಲ್ ಸ್ಟಾರ್ಕ್ ಹಾಗೂ ಜೋಶ್ ಹಾಜಲ್ ವುಡ್ ಬೌಲಿಂಗ್ ದಾಳಿಗೆ ತತ್ತರಿಸಿದ ಬಾಂಗ್ಲಾದೇಶದ ಕ್ರಿಕೆಟ್ ತಂಡವು 8 ವಿಕೆಟ್ ಗಳಿಂದ ಹೀನಾಯ ಸೋಲು ಕಂಡಿದೆ.

ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯ 34ನೇ ಪಂದ್ಯದಲ್ಲಿ ಟಾಸ್ ಗೆದ್ದ ಆಸೀಸ್ ಫೀಲ್ಡಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ 15ನೇ ಓವರ್ ಅಂತ್ಯಕ್ಕೆ ಸರ್ವಪತನ ಕಂಡು ಕೇವಲ 73 ರನ್ ಗಳಿಸಿತ್ತು. ಇನ್ನು ಆಸೀಸ್ ಪರ ಆ್ಯಡಮ್ ಜಂಪಾ 5 ವಿಕೆಟ್ ಉರುಳಿಸಿ ಪಂದ್ಯ ಶ್ರೇಷ್ಠಕ್ಕೆ ಭಾಜನರಾದರೆ, ಮಿಚೆಲ್ ಸ್ಟಾರ್ಕ್ ಹಾಗೂ ಜೋಶ್ ಹಾಜಲ್ ವುಡ್ ತಲಾ ಎರಡು ವಿಕೆಟ್ ಕಿತ್ತು ತಂಡದ ಗೆಲುವಿಗೆ ಕೊಡುಗೆ ನೀಡಿದರು.

ಸಾಧಾರಣ ರನ್‌ಗಳ ಮೊತ್ತದ ಟಾರ್ಗೆಟ್ ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು 6.2 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 78 ರ‌ನ್ ಚೆಚ್ಚಿ ಗೆದ್ದು ಬೀಗಿತು.

Edited By : Nirmala Aralikatti
PublicNext

PublicNext

04/11/2021 07:18 pm

Cinque Terre

47.56 K

Cinque Terre

0