ಜೈಪುರ: ಅಂಡರ್-19 ಚಾಲೆಂಜರ್ ಟ್ರೋಫಿಯಲ್ಲಿ ಭಾರತದ ಮಹಿಳೆಯರ ಬಿ ತಂಡದ ಪರ ಬ್ಯಾಟರ್ ಅನುಷ್ಕಾ ಶರ್ಮಾ ಅರ್ಧಶತಕ ಬಾರಿಸಿದ ಕುರಿತು ಬಿಸಿಸಿಐ ಮಾಡಿದ ಟ್ವೀಟ್ ವೈರಲ್ ಆಗಿದೆ.
ಅರ್ಧಶತಕ ಸಿಡಿಸಿದ್ದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಎಂದು ಕೆಲ ನೆಟ್ಟಿಗರು ತಿಳಿದಿದ್ದಾರೆ. ಇದರಿಂದಾಗಿ ಬಿಸಿಸಿಐ ಟ್ವೀಟ್ ವೈರಲ್ ಆಗಿದ್ದು, ನೆಟ್ಟಿಗರು ತಮ್ಮದೇ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಯಾರಿದು ಬ್ಯಾಟರ್ ಅನುಷ್ಕಾ ಶರ್ಮಾ?:
ಮಹಿಳೆಯರ ಅಂಡರ್-19 ಏಕದಿನ ಚಾಲೆಂಜರ್ ಟ್ರೋಫಿಯು ನವೆಂಬರ್ 2ರಂದು ಪ್ರಾರಂಭವಾಗಿದ್ದು, ಟೂರ್ನಿಯ ಆರಂಭಿಕ ಪಂದ್ಯವು ಜೈಪುರದ ಆರ್‌ಸಿಎ ಅಕಾಡೆಮಿ ಮೈದಾನದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಮುಖಾಮುಖಿಯಾಗಿದ್ದ ಭಾರತದ ಎ ತಂಡದ ವಿರುದ್ಧ ಬಿ ತಂಡದ ನಾಯಕಿ ಅನುಷ್ಕಾ ಶರ್ಮಾ ಅವರ ಆಲ್‌ರೌಂಡ್ ಪ್ರದರ್ಶನ ನೀಡಿದರು.
PublicNext
03/11/2021 04:26 pm