ಅಬುಧಾಬಿ: ಆರಂಭಿಕ ಬ್ಯಾಟರ್ ಗಳಾದ ಮೊಹಮ್ಮದ್ ರಿಜ್ವಾನ್ ಹಾಗೂ ನಾಯಕ ಬಾಬರ್ ಆಜಮ್ ಅದ್ಭುತ ಜೊತೆಯಾಟದಿಂದ ಪಾಕಿಸ್ತಾನ ತಂಡವು ನಮೀಬಿಯಾಗೆ 190 ರನ್‌ಗಳ ಗುರಿ ನೀಡಿದೆ.
ಟಿ20 ವಿಶ್ವಕಪ್ ಟೂರ್ನಿಯ ಭಾಗವಾಗಿ ನಡೆಯುತ್ತಿರುವ 31ನೇ ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ಮೊದಲು ಬ್ಯಾಟಿಂಗ್ ಮಾಡಿ 2 ವಿಕೆಟ್ ನಷ್ಟಕ್ಕೆ 189 ರನ್ ಚಚ್ಚಿದೆ. ಪಾಕಿಸ್ತಾನದ ಪರ ಮೊಹಮ್ಮದ್ ರಿಜ್ವಾನ್ ಅಜೇಯ 77 ರನ್, ಬಾಬರ್ ಆಜಮ್ 70 ರನ್ ಹಾಗೂ ಮೊಹಮ್ಮದ್ ಹಫೀಜ್ ಅಜಯ 32 ರನ್ ಬಾರಿಸಿದರು.
PublicNext
02/11/2021 09:30 pm