ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಹ್ಲಿ ವಿರುದ್ಧ ಕಪಿಲ್ ಗರಂ ಆಗಿದ್ಯಾಕೆ?

ನವೆದೆಹಲಿ: ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಟೀಂ ಇಂಡಿಯಾ ಸತತ ಎರಡು ಬಾರಿ ಸೋಲು ಕಂಡ ಹಿನ್ನೆಲೆಯಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಈ ನಡುವೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿಕೆಗೆ ಭಾರತದ ಮಾಜಿ ನಾಯಕ ಕಪಿಲ್ ದೇವ್ ಕೊಂಚ ಗರಂ ಆಗಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ಎಂಟು ವಿಕೆಟ್ ಅಂತರದ ಸೋಲಿಗೆ ಶರಣಾಗಿತ್ತು. ಸೋಲಿನ ಬಳಿಕ ಪ್ರತಿಕ್ರಿಯೆ ನೀಡಿರುವ ಕೊಹ್ಲಿ, 'ಬ್ಯಾಟಿಂಗ್ ಅಥವಾ ಬೌಲಿಂಗ್‌ನಲ್ಲಿ ನಾವು ಧೈರ್ಯಶಾಲಿ ಆಗಿರಲಿಲ್ಲ. ನಮ್ಮ ದೈಹಿಕ ಭಾಷೆಯು ಧೈರ್ಯದಿಂದ ಕೂಡಿರಲಿಲ್ಲ' ಎಂದು ಹೇಳಿದ್ದರು.

ಇದೇ ವಿಚಾರವಾಗಿ 'ಎಬಿಪಿ ನ್ಯೂಸ್‌' ಜೊತೆಗೆ ಮಾತನಾಡಿದ ಕಪಿಲ್ ದೇವ್, "ನಿಸ್ಸಂಶಯವಾಗಿಯೂ ಇದು ವಿರಾಟ್ ಕೊಹ್ಲಿ ಅವರಂತಹ ದೊಡ್ಡ ಆಟಗಾರನ ದುರ್ಬಲ ಹೇಳಿಕೆಯಾಗಿದೆ. ಅವರು ತಂಡಕ್ಕಾಗಿ ಪಂದ್ಯ ಗೆಲ್ಲುವ ಬಯಕೆ ಹಾಗೂ ಹಂಬಲ ಹೊಂದಿದ್ದಾರೆ ಎಂದು ನಾವೆಲ್ಲರೂ ನಂಬುತ್ತೇವೆ. ಆದರೆ ತಂಡದ ದೈಹಿಕ ಭಾಷೆ ಹಾಗೂ ನಾಯಕನ ಚಿಂತನೆಯು ಹೀಗಾದ್ದಲ್ಲಿ ಡ್ರೆಸ್ಸಿಂಗ್ ಕೊಠಡಿಯೊಳಗಿನ ಆಟಗಾರರ ಮನೋಬಲವನ್ನು ಎತ್ತಿ ಹಿಡಿಯುವುದು ತುಂಬಾನೇ ಕಷ್ಟ" ಎಂದು ಹೇಳಿದ್ದಾರೆ.

'ಈ ಸನ್ನಿವೇಶದಲ್ಲಿ ತಂಡದ ಮನೋಬಲವನ್ನು ಮೇಲಕ್ಕೆತ್ತಲು ನಾನು ನನ್ನ ಸ್ನೇಹಿತ ಶಾಸ್ತ್ರಿ ಹಾಗೂ ಧೋನಿ ಅವರನ್ನು ಒತ್ತಾಯಿಸುತ್ತೇನೆ. ಈಗ ಆತ್ಮವಿಶ್ವಾಸವನ್ನು ತುಂಬುವುದು ಧೋನಿಯ ಜವಾಬ್ದಾರಿಯಾಗಿದೆ' ಎಂದು ತಿಳಿಸಿದ್ದಾರೆ.

Edited By : Vijay Kumar
PublicNext

PublicNext

02/11/2021 06:20 pm

Cinque Terre

20.29 K

Cinque Terre

0

ಸಂಬಂಧಿತ ಸುದ್ದಿ