ದುಬೈ : ನಾಯಕ ಬಾಬರ್ ಆಜಮ್ ಸಮಯೋಚಿತ ಅರ್ಧಶತಕ, ಫಖರ್ ಝಮಾನ್ ಉತ್ತಮ ಬ್ಯಾಟಿಂಗ್ ಸಹಾಯದಿಂದ ಪಾಕಿಸ್ತಾನ ಕ್ರಿಕೆಟ್ ತಂಡವು ಬಾಂಗ್ಲಾದೇಶದ ವಿರುದ್ಧ 5 ವಿಕೆಟ್‌ಗಳಿಂದ ಗೆಲುವು ಸಾಧಿಸಿದೆ.
ಟಿ20 ವಿಶ್ವಕಪ್ ಟೂರ್ನಿಯ ಭಾಗವಾಗಿ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ ತಂಡವು ಮೊದಲು ಬ್ಯಾಟಿಂಗ್ ಮಾಡಿ 6 ವಿಕೆಟ್ ನಷ್ಟಕ್ಕೆ 147 ರನ್ ಗಳಸಿತ್ತು. ಈ ಸಾಧಾರಣ ಟಾರ್ಗೆಟ್ ಬೆನ್ನತ್ತಿದ ಪಾಕಿಸ್ತಾನವು 6 ಎಸೆತಗಳು ಬಾಕಿ ಇರುವಂತೆ 5 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿ ಗೆದ್ದು ಬೀಗಿದೆ.
ಪಾಕಿಸ್ತಾನದ ಪರ ನಾಯಕ ಬಾಬರ್ ಆಜಮ್ 51 ರನ್, ಫಖರ್ ಝಮಾನ್ 30 ರನ್ ಹಾಗೂ ಕೊನೆಯಲ್ಲಿ ಆಸಿಫ್ ಅಲಿ ಅಜೇಯ 25 ರನ್ (7 ಎಸೆತ, 4 ಸಿಕ್ಸರ್) ಸಿಡಿದರು.
ಇದಕ್ಕೂ ಮುನ್ನ ಆಫ್ಘನ್ ಪರ ಮೊಹಮ್ಮದ್ ನಬಿ 35 ರನ್, ಗುಲ್ಬದಿನ್ ನಯಿಬ್ ಅಜೇಯ 35 ರನ್ ಹಾಗೂ ನಜೀಬುಲ್ಲಾ ಜದ್ರಾನ್ 22 ರನ್ ಗಳಿಸಿದ್ದರು. ಆದರೆ ರಹಮಾನುಲ್ಲಾ ಗುರ್ಬಾಜ್ (10 ರನ್), ಅಸ್ಗರ್ ಅಫಘಾನ್ (10 ರನ್), ಕರೀಂ ಜನತ್ (15 ರನ್) ರನ್ ಗಳಿಸಲು ಶಕ್ತರಾದರು. ಇನ್ನು ಪಾಕ್ ಪರ ಇಮಾದ್ ವಾಸೀಂ 2, ಶಹೀನ್ ಅಫ್ರೀದಿ ,ಹ್ಯಾರೀಸ್ ರೌಫ್ , ಹಸನ್ ಅಲಿ ಹಾಗೂ ಶದಬ್ದ್ ಖಾನ್ ತಲಾ 1 ವಿಕೆಟ್ ಪಡೆದಿದ್ದರು.
PublicNext
29/10/2021 11:13 pm