ಶಾರ್ಜಾ: ಬ್ಯಾಟಿಂಗ್‌ನಲ್ಲಿ ವೈಫಲ್ಯ ತೋರಿದರೂ ಬೌಲಿಂಗ್‌ನಲ್ಲಿ ಕಮಾಲ್ ತೋರಿದ ವೆಸ್ಟ್ ಇಂಡೀಸ್ ತಂಡವು ಬಾಂಗ್ಲಾದೇಶದ ವಿರುದ್ಧ 3 ರನ್‌ಗಳಿಂದ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ 2021ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಿದ ಮೂರು ಪಂದ್ಯಗಳಲ್ಲೂ ಬಾಂಗ್ಲಾ ಸೋಲಿಗೆ ತುತ್ತಾಗಿದೆ.
ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯ 23ನೇ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶದ ನಾಯಕ ಮಹಮ್ಮದುಲ್ಲಾ ಬೌಲಿಂಗ್ ಆಯ್ದುಕೊಂಡಿತ್ತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡವು 7 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಿತ್ತು. ಈ ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ಬಾಂಗ್ಲಾ ತಂಡವು 5 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಲು ಶಕ್ತವಾಯಿತು. ಬಾಂಗ್ಲಾದೇಶದ ಪರ ಲಿಟನ್ ದಾಸ್ 44 ರನ್ ಹಾಗೂ ನಾಯಕ ಮಹಮ್ಮದುಲ್ಲಾ ಅಜೇಯ 31 ರನ್ ಗಳಿಸಿದರು.
ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ ಪರ ನಿಕೋಲಸ್ ಪೂರನ್ 40 ರನ್ ಹಾಗೂ ರೋಸ್ಟನ್ ಚೇಸ್ 39 ರನ್ ಗಳಿಸಿದ್ದರು. ಇನ್ನು ಕ್ರಿಸ್ ಗೇಲ್ (4 ರನ್), ಎವಿನ್ ಲೆವಿಸ್ (6 ರನ್), ಶಿಮ್ರಾನ್ ಹೆಟ್ಮೆಯರ್ (9 ರನ್) ಹಾಗೂ ಆಂಡ್ರೆ ರಸೆಲ್ (ಶೂನ್ಯ ರನ್) ಬಹುಬೇಗ ವಿಕೆಟ್ ಒಪ್ಪಿಸಿದ್ದರು. ಇನ್ನು ಬಾಂಗ್ಲಾದೇಶದ ಪರ ಮಹೇದಿ ಹಸನ್, ಮುಸ್ತಫಿಜುರ್ ರೆಹಮಾನ್ ಹಾಗೂ ಶೋರಿಫುಲ್ ಇಸ್ಲಾಂ ತಲಾ ಎರಡು ವಿಕೆಟ್ ಪಡೆದುಕೊಂಡಿದ್ದರು.
PublicNext
29/10/2021 07:56 pm