ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

T20 WC | AUS vs SL: ವಾರ್ನರ್ ಅರ್ಧ ಶತಕ, ಫಿಂಚ್ ಅಬ್ಬರ- ಆಸೀಸ್‌ಗೆ 7 ವಿಕೆಟ್‌ಗಳಿಂದ ಗೆಲುವು

ದುಬೈ: ಡೇವಿಡ್ ವಾರ್ನರ್ ಅರ್ಧಶತಕ, ನಾಯಕ ಆರನ್ ಫಿಂಚ್ ಅಬ್ಬರ ಬ್ಯಾಟಿಂಗ್ ಸಹಾಯದಿಂದ ಆಸ್ಟ್ರೇಲಿಯಾ ತಂಡವು ಶ್ರೀಲಂಕಾ ವಿರುದ್ಧ 7 ವಿಕೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದೆ.

ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯ 22ನೇ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಆರನ್ ಫಿಂಚ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡವು 6 ವಿಕೆಟ್ ನಷ್ಟಕ್ಕೆ 154 ರನ್‌ ಗಳಿಸಿತ್ತು.

155 ರನ್‌ಗಳ ಟಾರ್ಗೆಟ್ ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು 18 ಎಸೆತಗಳು ಬಾಕಿ ಇರುವಂತೆ 3 ವಿಕೆಟ್ ನಷ್ಟಕ್ಕೆ 155 ರನ್‌ ಚಚ್ಚಿ ಗೆದ್ದು ಬೀಗಿದೆ. ಇನ್ನು ಆಸೀಸ್ ಪರ ಡೇವಿಡ್ ವಾರ್ನರ್ 65 ರನ್, ನಾಯಕ 37 ರನ್ ಹಾಗೂ ಸ್ಟೀವ್ ಸ್ಮಿತ್ 28 ರನ್ ಗಳಿಸಿದರು.

ಇದಕ್ಕೂ ಮುನ್ನ ಶ್ರೀಲಂಕಾ ಪರ ಕುಸಲ್ ಪೆರೆರಾ, ಪಾತುಮ್ ನಿಸಂಕ ತಲಾ 35 ರನ್ ಹಾಗೂ ಭಾನುಕಾ ರಾಜಪಕ್ಸೆ ಅಜೇಯ 33 ರನ್‌ ಗಳಿಸಿದ್ದರು. ಇನ್ನು ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ ಹಾಗೂ ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್ ತಲಾ ಎರಡು ವಿಕೆಟ್ ಕಿತ್ತಿದ್ದರು.

Edited By : Vijay Kumar
PublicNext

PublicNext

28/10/2021 10:53 pm

Cinque Terre

60.73 K

Cinque Terre

0

ಸಂಬಂಧಿತ ಸುದ್ದಿ