ಅಬುಧಾಬಿ: ಟಿಮಲ್ ಮಿಲ್ಸ್ ಉತ್ತಮ ಬೌಲಿಂಗ್, ಬಳಿಕ ಜೇಸನ್ ರಾಯ್ ಸ್ಫೋಟಕ ಬ್ಯಾಟಿಂಗ್ ಸಹಾಯದಿಂದ ಇಂಗ್ಲೆಂಡ್ ತಂಡವು ಬಾಂಗ್ಲಾದೇಶದ ವಿರುದ್ಧ 8 ವಿಕೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದೆ.
ಟಿ20 ವಿಶ್ವಕಪ್ ಟೂರ್ನಿಯ ಭಾಗವಾಗಿ ಅಬುಧಾಬಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 20ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಬಾಂಗ್ಲಾ 9 ವಿಕೆಟ್ ನಷ್ಟಕ್ಕೆ ಕೇವಲ 124 ರನ್ ಗಳಿಸಲು ಶಕ್ತವಾಗಿತ್ತು. ಈ ಸಾಧಾರಣ ಮೊತ್ತ ಟಾರ್ಗೆಟ್ ಬೆನ್ನತ್ತಿದ ಆಂಗ್ಲ ಪಡೆ 35 ಎಸೆತಗಳು ಬಾಕಿ ಇರುವಂತೆ 2 ವಿಕೆಟ್ ನಷ್ಟಕ್ಕೆ 126 ರನ್ ಗಳಿಸಿ ಗೆದ್ದು ಬೀಗಿದೆ.
ಇಂಗ್ಲೆಂಡ್ ಪರ ಜೇಸನ್ ರಾಯ್ 61 ರನ್, ಡೇವಿಡ್ ಮಲನ್ ... ರನ್, ಜೋಸ್ ಬಟ್ಲರ್ 18 ರನ್ ಹಾಗೂ ಜಾನಿ ಬೈರ್‌ಸ್ಟೋವ್ ರನ್ ಗಳಿಸಿದರು.
ಇದಕ್ಕೂ ಮುನ್ನ ಟಾಸ್ ಗೆದ್ದು ಭಾರೀ ವಿಶ್ವಾಸದೊಂದಿಗೆ ಬ್ಯಾಟಿಂಗ್‌ಗೆ ಇಳಿದಿದ್ದ ಬಾಂಗ್ಲಾ ತಂಡವು ಆಂಗ್ಲರ ಬೌಲಿಂಗ್ ದಾಳಿಗೆ ನಲುಗಿ ಹೋಗಿತ್ತು. ಬಾಂಗ್ಲಾ ಪರ ಮುಶ್ಫಿಕರ್ ರಹೀಮ್ (29 ರನ್) ಬಿಟ್ಟರೆ ಯಾವುದೇ ಆಟಗಾರರು 20 ರನ್‌ಗಳ ಗಡಿ ದಾಟುವಲ್ಲಿ ವಿಫಲರಾಗಿದ್ದರು. ಇನ್ನು ಇಂಗ್ಲೆಂಡ್ ಪರ ಟಿಮಲ್ ಮಿಲ್ಸ್ 3 ವಿಕೆಟ್ ಉರುಳಿಸಿದ್ದರೆ, ಮೊಯಿನ್ ಅಲಿ ಹಾಗೂ ಲಿಯಾಮ್ ಲಿವಿಂಗ್ಸ್ಟೋನ್ ತಲಾ 2 ವಿಕೆಟ್, ಕ್ರಿಸ್ ವೋಕ್ಸ್ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
PublicNext
27/10/2021 06:39 pm