ಅಬುಧಾಬಿ: ಟಾಸ್ ಗೆದ್ದು ಭಾರೀ ವಿಶ್ವಾಸದೊಂದಿಗೆ ಬ್ಯಾಟಿಂಗ್‌ಗೆ ಇಳಿದ ಬಾಂಗ್ಲಾದೇಶವು ಆಂಗ್ಲರ ಬೌಲಿಂಗ್ ದಾಳಿಗೆ ನಲುಗಿದೆ. ಪರಿಣಾಮ ಮಹಮ್ಮದುಲ್ಲಾ ನೇತೃತ್ವದ ಪಡೆಯು ಇಂಗ್ಲೆಂಡ್‌ಗೆ 125 ರನ್‌ಗಳ ಸಾಧಾರಣ ಮೊತ್ತದ ಗುರಿ ನೀಡಿದೆ.
ಟಿ20 ವಿಶ್ವಕಪ್‌ನ ಭಾಗವಾಗಿ ಅಬುಧಾಬಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ 20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ 9 ವಿಕೆಟ್ ನಷ್ಟಕ್ಕೆ ಕೇವಲ 124 ರನ್ ಗಳಿಸಲು ಶಕ್ತವಾಯಿತು. ಬಾಂಗ್ಲಾ ಪರ ಮುಶ್ಫಿಕರ್ ರಹೀಮ್ (29 ರನ್) ಬಿಟ್ಟರೆ ಯಾವುದೇ ಆಟಗಾರರು 20 ರನ್‌ಗಳ ಗಡಿ ದಾಟುವಲ್ಲಿ ವಿಫಲರಾದರು.
ಇನ್ನು ಇಂಗ್ಲೆಂಡ್ ಪರ ಟಿಮಲ್ ಮಿಲ್ಸ್ 3 ವಿಕೆಟ್ ಉರುಳಿಸಿದರೆ, ಮೊಯಿನ್ ಅಲಿ ಹಾಗೂ ಲಿಯಾಮ್ ಲಿವಿಂಗ್ಸ್ಟೋನ್ ತಲಾ 2 ವಿಕೆಟ್, ಕ್ರಿಸ್ ವೋಕ್ಸ್ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
PublicNext
27/10/2021 05:25 pm