ಅಬುಧಾಬಿ: ಟಿ20 ವಿಶ್ವಕಪ್ ನಲ್ಲಿ ಇಂದು ಇಂಗ್ಲೆಂಡ್-ಬಾಂಗ್ಲಾದೇಶ ಮುಖಾಮುಖಿಯಾಗಲಿವೆ. ಇದು ಉಭಯ ತಂಡಗಳ ನಡುವಿನ ಮೊಟ್ಟಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯ ಇದಾಗಿದೆ. ಇಂಗ್ಲೆಂಡ್ ಹಾಗೂ ಬಾಂಗ್ಲಾದೇಶ ಇದುವರೆಗೂ ಟಿ20 ಪಂದ್ಯದಲ್ಲಿ ಮುಖಾಮುಖಿಯಾಗಿಲ್ಲ. ಉಭಯ ತಂಡಗಳ ನಡುವೆ ಮೊದಲ ಪಂದ್ಯ ಬುಧವಾರ ಐಸಿಸಿ ಟಿ20 ವಿಶ್ವಕಪ್ ನಲ್ಲಿ (ICC T20 World Cup) ನಡೆಯಲಿದೆ.
ಕಳೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ವೆಸ್ಟ್ಇಂಡೀಸ್ ವಿರುದ್ಧ ಭರ್ಜರಿಯಾಗಿ ಗೆದ್ದಿರುವ ಇಂಗ್ಲೆಂಡ್ ಈ ಪಂದ್ಯದಲ್ಲೂ ಗೆದ್ದು ಬಾಂಗ್ಲಾದೇಶ ವಿರುದ್ಧ ಜಯದ ಖಾತೆ ತೆರೆಯುವ ತವಕದಲ್ಲಿದೆ.ಇನ್ನು ಬಾಂಗ್ಲಾದೇಶಕ್ಕಿದು ನಿರ್ಣಾಯಕ ಪಂದ್ಯ. ಮೊದಲ ಪಂದ್ಯದಲ್ಲಿ ಶ್ರೀಲಂಕಾಗೆ ಶರಣಾಗಿದ್ದ ಬಾಂಗ್ಲಾ, ಈ ಪಂದ್ಯದಲ್ಲಿ ಸೋತರೆ ಸೆಮಿಫೈನಲ್ ಹಾದಿ ಕಠಿಣಗೊಳ್ಳಲಿದೆ.
*ಪಂದ್ಯ ಆರಂಭ: ಮಧ್ಯಾಹ್ನ 3.30
*ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್.
PublicNext
27/10/2021 11:53 am