ನವದೆಹಲಿ: ಬ್ಲಾಂಕ್ ಚೆಕ್ ಎಲ್ಲಿ? ಎಂದು ನೆಟ್ಟಿಗರು ಪಾಕಿಸ್ತಾನದ ಕ್ರಿಕೆಟ್ ಬೋರ್ಡ್ ಅಧ್ಯಕ್ಷ ರಮೀಜ್ ರಾಜಾ ಅವರನ್ನು ಪ್ರಶ್ನಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ರಮೀಜ್ ರಾಜಾ ಕಾಲೆಳೆಯುತ್ತಿದ್ದಾರೆ.
ಹೌದು. ಟಿ20 ವಿಶ್ವಕಪ್ಗೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ರಮೀಜ್ ರಾಜಾ, 'ಪಾಕಿಸ್ತಾನ ಕ್ರಿಕೆಟ್ ತಂಡವು ಟೀಂ ಇಂಡಿಯಾ ವಿರುದ್ಧ ಗೆಲುವು ಸಾಧಿಸಿದರೆ ಬ್ಲಾಂಕ್ ಚೆಕ್ ಸಿಗಲಿದೆ' ಎಂದು ಹೇಳಿದ್ದರು. ಆದ್ರೀಗ ರಮೀಜ್ ರಾಜಾ ಬ್ಲಾಂಕ್ ಚೆಕ್ ಬಗ್ಗೆ ಮಾತನಾಡುತ್ತಿಲ್ಲ. ಹೀಗಾಗಿ ಪಾಕ್ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಅನೇಕ ನೆಟ್ಟಿಗರು ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷರ ಕಾಲೆಳೆಯಲು ಮುಂದಾಗಿದ್ದು, ಬ್ಲಾಂಕ್ ಚೆಕ್ ಎಲ್ಲಿ ಎಂದು ಪ್ರಶ್ನಿಸುತ್ತಿದ್ದಾರೆ.?
'ಪಿಸಿಬಿ ಮಿಲಿಯನೇರ್ ಆಗಲಿದೆಯೇ? ಹಲೋ ರಮೀಜ್ ರಾಜಾ ಅವರೆ ನಿಮಗೆ ಒಂದು ಜ್ಞಾಪನೆ. ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನವು ಭಾರತವನ್ನು ಸೋಲಿಸಿದರೆ ಬ್ಲಾಂಕ್ ಚೆಕ್ ನೀಡುವ ಭರವಸೆ ನೀಡಿದ್ದ ಉದ್ಯಮಿಗೆ ಕರೆ ಮಾಡಿ. ಈ ಮೂಲಕ ಬ್ಲಾಂಕ್ ಚೆಕ್ ಕೇಳಿ' ಎಂದು ರಮೀಜ್ ರಾಜಾ ಕಾಲೆಳೆದಿದ್ದಾರೆ.
PublicNext
26/10/2021 10:07 pm