ಲಾಹೋರ್ : T20 ವಿಶ್ವಕಪ್ ನಲ್ಲಿ ಪಾಕಿಸ್ತಾನ ಮೊದಲ ಬಾರಿಗೆ ಭಾರತವನ್ನು ಸೋಲಿಸಿದ ಸಂಭ್ರಮದಲ್ಲಿದೆ. ಆದರೆ ಈ ಸಂಭ್ರಮ ಅನುಭವಿಸಲು ನಾಯಕನಿಗೆ ಮಾತ್ರ ಸಾಧ್ಯವಾಗುತ್ತಿಲ್ಲ. ಹೌದು ಇಷ್ಟು ದಿನ ಸುಮ್ಮನ್ನಿದ್ದ ನಾಯಕ ಬಾಬರ್ ಅಜಮ್ ನ ಗೆಳತಿ ಇದೀಗ 10 ವರ್ಷಗಳ ಕಾಲ ಬಾಬರ್ ಶೋಷಣೆ ಮಾಡಿರುವುದಾಗಿ ಗಂಭೀರ ಆರೋಪ ಮಾಡಿದ್ದಾರೆ.
ಬಾಬರ್ ಅಜಮ್ ಅವರ 'ಗೆಳತಿ' ಕುರಾನ್ ಮೇಲೆ ಕೈ ಇಡುವ ಮೂಲಕ ಪ್ರಮಾಣ ಮಾಡಿದ್ದು,, ಪಾಕಿಸ್ತಾನದ ಕ್ಯಾಪ್ಟನ್ 10 ವರ್ಷಗಳಿಂದ ಶೋಷಣೆಗೆ ಒಳಗಾಗಿದ್ದಾಗಿ ಎಂದಿದ್ದಾರೆ.
ತನ್ನನ್ನು ಬಾಬರ್ ಅಜಮ್ ಗೆಳತಿ ಎಂದು ಬಣ್ಣಿಸಿಕೊಳ್ಳುವ ಹಮೀದ ಮುಖ್ತಾರ್ ಬಾಬರ್ ವಿಜಯೋತ್ಸವಕ್ಕೆ ಕಲ್ಲು ಹಾಕಿದ್ದಾರೆ. ಬಾಬರ್ ಮದುವೆ ಭರವಸೆ ನೀಡಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಹೇಳಿಕೊಂಡಿದ್ದು, ಈಗ ಪಾಕಿಸ್ತಾನದ ಕ್ಯಾಪ್ಟನ್ ನಿಕಾಹ್ ನಿಂದ ವಿಮುಖರಾಗುತ್ತಿದ್ದಾರೆ ಎಂದು ಪಾಕ್ ಪತ್ರಿಕೆ ವರದಿ ಮಾಡಿದೆ. ತಾನು ಬಾಬರ್ ಅಜಮ್ ನ ಮಗುವಿನ ತಾಯಿ ಆಗಲಿದ್ದೇನೆ ಎಂದು ಮಹಿಳೆ ಹೇಳಿದರು.
ಬಾಬರ್ ಅವರ ಕುಟುಂಬವು ಪ್ರಕರಣವನ್ನು ಮುಚ್ಚಿಹಾಕಲು 20 ಲಕ್ಷ ರೂ.ಗಳನ್ನು ನೀಡಿತ್ತು ಎಂದಿದ್ದಾರೆ.
PublicNext
26/10/2021 09:15 am