ಮಡಿಕೇರಿ:ಭಾರತ ಮತ್ತು ಪಾಕಿಸ್ತಾನದ ಪಂದ್ಯದಲ್ಲಿ ಇಂಡಿಯನ್ ಟೀಂ ಸೋತಿದ್ದಕ್ಕೆ ಅನೇಕರು ಅತೀವ ನೋವಿನಲ್ಲಿಯೇ ಇದ್ದಾರೆ. ಆದರೆ ಮಡಿಕೇರಿಯ ದೊಡ್ಡಮಳ್ತೆ ಗ್ರಾಮದ ಇಂಡಿಯನ್ ಟೀಮ್ ಅಭಿಮಾನಿ, ಭಾರತ ಸೋತ ಕೂಡಲೆ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಸೋಮವಾರ ಪೇಟೆಯ ದೊಡ್ಡಮಳ್ತೆ ಗ್ರಾಮದ 55 ವರ್ಷದ ಡಿ.ಎ.ಉದಯ್ ಹೃದಯಾಘಾತದಿಂದ ಮೃತಪಟ್ಟ ಇಂಡಿಯನ್ ಟೀಮ್ ಅಭಿಮಾನಿ. ಪಂದ್ಯ ವೀಕ್ಷಿಸುತ್ತಿದ್ದ ಈ ಅಭಿಮಾನಿ, ಇಂಡಿಯಾ ಸೋತ ತಕ್ಷಣವೇ ಹೃದಯಾಘಾತದಿಂದ ಮನೆಯಲ್ಲಿಯೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಮನೆಯ ಸದಸ್ಯರು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆ ಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಮಾರ್ಗ ಮಧ್ಯೆದಲ್ಲಿಯೇ ಉದಯ್ ಮೃತಪಟ್ಟಿದ್ದಾರೆ. ಇಂಡಿಯನ್ ಟೀಮ್ ಅಭಿಮಾನಿ ಉದಯ್,ಪತ್ನಿ,ಪುತ್ರ ಮತ್ತು ಪುತ್ರಿಯನ್ನ ಅಗಲಿದ್ದಾರೆ.
PublicNext
25/10/2021 04:09 pm