ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೋಬಾಲ್ ಗೆ ಕೆ.ಎಲ್.ರಾಹುಲ್ ಔಟ್ ಅಂಪೈರ್ ವಿರುದ್ಧ ಅಭಿಮಾನಿಗಳ ಆಕ್ರೋಶ

ನವದೆಹಲಿ: ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಣ ಹೈ ವೋಲ್ಟೇಜ್ ಪಂದ್ಯದಲ್ಲಿ ಭಾರತ ಸೋಲನ್ನು ಅನುಭವಿಸಿದ್ದು ಭಾರತೀಯರಿಗೆ ತೀರಾ ನೋವು ತಂದಿದೆ. ಇನ್ನು ನಿನ್ನೆ ನಡೆದ ಪಂದ್ಯದಲ್ಲಿ ನೋ ಬಾಲ್ ಗೆ ಕೆ.ಎಲ್.ರಾಹುಲ್ ಅವರನ್ನು ಔಟ್ ಎಂದು ಘೋಷಿಸಿದ ಅಂಪೈರ್ ವಿರುದ್ಧ ಅಭಿಮಾನಿಗಳ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹೌದು ಪಾಕಿಸ್ತಾನದ ಎಡಗೈ ವೇಗಿ ಶಾಹೀನ್ ಅಫ್ರಿದಿ ಅವರು ಭಾರತದ ವಿರುದ್ಧದ ತಮ್ಮ ಮೊದಲ ಸ್ಪೆಲ್ನಲ್ಲಿ ಓಪನರ್ ಗಳಾದ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಅವರನ್ನು ಔಟ್ ಮಾಡುವ ಮೂಲಕ ಭಾರತಕ್ಕೆ ಆರಂಭಿಕ ಆಘಾತ ನೀಡಿದ್ದರು.

ಆದರೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಶಾಹಿನ್ ಎಸೆದ ಆ ಬಾಲ್ ನೋಬಾಲ್ ಆಗಿತ್ತು, ಆದಾಗ್ಯೂ ಅಂಪೈರ್ ಔಟ್ ನೀಡಿದ್ದಕ್ಕೆ , ಶಾಹಿನ್ ಎಸೆದ ಆ ಎಸೆತದ ಗತಿಯನ್ನು ಗುರುತಿಸಲು ವಿಫಲರಾದ ಕೆ.ಎಲ್ ರಾಹುಲ್ ಕ್ಲೀನ್ ಬೌಲ್ಡ್ ಆಗಿದ್ದರು, ಆದರೆ ಅಫ್ರಿದಿ ಅವರ ಪಾದ ಕ್ರೀಸ್ ನ ಹೊರಗಿದೆ ಎನ್ನುವುದನ್ನು ಅಭಿಮಾನಿಗಳ ವಾದ.

ಇನ್ನು ಆ ಎಸೆತದ ಸ್ಕ್ರೀನ್ ಶಾಟ್ ಹಂಚಿಕೊಂಡಿರುವ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.

ಭಾರತ ತಂಡಕ್ಕೆ ಶಾಹಿನ್ ಆಫ್ರಿದಿ ನೀಡಿದ ಆರಂಭಿಕ ಆಘಾತದಿಂದ ಚೇತರಿಸಿಕೊಳ್ಳಲು ಸಾಕಷ್ಟು ಸಮಯ ಹಿಡಿಯಿತು.ಮಧ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ರಿಶಬ್ ಪಂತ್ ಅವರ ಬ್ಯಾಟಿಂಗ್ ನಿಂದಾಗಿ ಭಾರತ ನಂತರ ಸ್ಪರ್ಧಾತ್ಮಕ ಮೊತ್ತವನ್ನು ಗಳಿಸಲು ಸಾಧ್ಯವಾಯಿತು.

ಆದರೆ ಈಗ ಕೆ.ಎಲ್ ರಾಹುಲ್ ಅವರು ವಿಚಾರದಲ್ಲಿನ ಕಳಪೆ ಅಂಪೈರಿಂಗ್ ವಿಚಾರಕ್ಕೆ ಅಭಿಮಾನಿಗಳು ತೀವ್ರ ಅಸಮಾಧಾನಗೊಂಡಿದ್ದಾರೆ.ಕೆಲವರು ಇಂತಹ ಪ್ರಮುಖ ಪಂದ್ಯಗಳಲ್ಲಿ ಈ ಪ್ರಮಾದಗಳು ಸಂಭವಿಸಕೊಡದು ಎಂದಿದ್ದಾರೆ.

Edited By : Nirmala Aralikatti
PublicNext

PublicNext

25/10/2021 08:05 am

Cinque Terre

73.91 K

Cinque Terre

26

ಸಂಬಂಧಿತ ಸುದ್ದಿ