ದುಬೈ: ವಿರಾಟ್ ಕೊಹ್ಲಿ ತಾಳ್ಮೆಯ ಅರ್ಧಶತಕ ಹಾಗೂ ರಿಷಭ್ ಪಂತ್ ಅಬ್ಬರದ ಸಹಾಯದಿಂದ ಭಾರತ ತಂಡವು ಪಾಕಿಸ್ತಾನಕ್ಕೆ 152 ರನ್‌ಗಳ ಗುರಿ ನೀಡಿದೆ.
ಟಿ20 ವಿಶ್ವಕಪ್ ಟೂರ್ನಿಯ ಭಾಗವಾಗಿ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು 7 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿದೆ.
ಟೀಂ ಇಂಡಿಯಾ ಪರ ನಾಯಕ ವಿರಾಟ್ ಕೊಹ್ಲಿ 57 ರನ್, ರಿಷಭ್ ಪಂತ್ 39 ರನ್, ಹಾರ್ದಿಕ್ ಪಾಂಡ್ಯ 11 ರನ್ ಗಳಿಸಿದರು. ಇನ್ನು ರೋಹಿತ್ ಶರ್ಮಾ ಶೂನ್ಯಕ್ಕೆ ವಿಕೆಟ್ ಒಪ್ಪಿದರೆ, ಕೆ.ಎಲ್. ರಾಹುಲ್ (3 ರನ್) ಹಾಗೂ ಸೂರ್ಯಕುಮಾರ್ ಯಾದವ್ (11 ರನ್), ರವೀಂದ್ರ ಜಡೇಜಾ (13 ರನ್) ಬ್ಯಾಟಿಂಗ್ ವೈಫಲ್ಯ ಎದುರಿಸಿದರು.
ಇನ್ನು ಪಾಕಿಸ್ತಾನದ ಪರ ಶಹೀನ್ ಶಾ ಅಫ್ರಿದಿ 3 ವಿಕೆಟ್ ಪಡೆದರೆ, ಹಸನ್ ಅಲಿ 2 ವಿಕೆಟ್, ಶದಾಬ್ ಖಾನ್ ಹಾಗೂ ಹ್ಯಾರಿಷ್ ರೌಫ್ ತಲಾ ಒಂದು ವಿಕೆಟ್ ಉರುಳಿಸಿದರು.
PublicNext
24/10/2021 09:21 pm