ನವದೆಹಲಿ: ಟೀಂ ಇಂಡಿಯಾ ಮುಖ್ಯ ಕೋಚ್ ಸೇರಿ ಪ್ರಮುಖ ಹುದ್ದೆಗಳಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧಿಕೃತವಾಗಿ ಅರ್ಜಿ ಆಹ್ವಾನಿಸಿದೆ. ಇತ್ತ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ (NCA) ಒಂದು ಹುದ್ದೆಗೆ ಕೂಡ ಅರ್ಜಿ ಕರೆದಿದೆ.
ಟೀಂ ಇಂಡಿಯಾ ಪುರುಷರ ಪ್ರಮುಖ ತಂಡಕ್ಕೆ ಹೆಡ್ಕೋಚ್ ಜೊತೆಗೆ ಬ್ಯಾಟಿಂಗ್ ಕೋಚ್, ಬೌಲಿಂಗ್ ಕೋಚ್, ಫೀಲ್ಡಿಂಗ್ ಕೋಚ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹಾಗೇ ಎನ್ಸಿಎನಲ್ಲಿ ಸ್ಪೋರ್ಟ್ಸ್ ಸೈನ್ಸ್ ಮತ್ತು ಮೆಡಿಸಿನ್ ಮುಖ್ಯಸ್ಥ ಸ್ಥಾನಕ್ಕೂ ಅರ್ಜಿ ಸಲ್ಲಿಸಬಹುದಾಗಿದೆ.
ಹೆಡ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 26, ಸಂಜೆ 5ರೊಳಗೆ ದಿನಾಂಕವಾಗಿದೆ. ಇನ್ನು ಉಳಿದ ನಾಲ್ಕು ಹುದ್ದೆಗಳಿಗೆ ನವೆಂಬರ್ 3, ಸಂಜೆ 5ರೊಳಗೆ ಅರ್ಜಿ ಸಲ್ಲಿಕೆ ಮಾಡಬೇಕು ಎಂದು ಬಿಸಿಸಿಐ ಸೂಚಿಸಿದೆ. ಅರ್ಜಿ ಸಲ್ಲಿಸಲು ಅಭ್ಯರ್ಥಿಯ ಮಾನದಂಡಗಳೇನು ಅನ್ನೋದರ ಕುರಿತು ತನ್ನ ಬಿಸಿಸಿಐ ವೆಬ್ಸೈಟ್ನಲ್ಲಿ ಸಂಪೂರ್ಣ ವಿವರ ನೀಡಿದೆ. ಹಾಗೇ ಪ್ರತಿ ಹುದ್ದೆಗೂ ಪ್ರತ್ಯೇಕ ಇ-ಮೇಲ್ ಅನ್ನು ನೀಡಿದೆ.
PublicNext
17/10/2021 07:32 pm