ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021 ಪಂದ್ಯಾವಳಿಯಲ್ಲಿ ವಿಜಯಪತಾಕೆ ಹಾರಿಸಿದ ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್ ಕೆ) ತಂಡಕ್ಕೆ 20 ಕೋಟಿ ರೂಪಾಯಿಗಳ ಬಹುಮಾನ ನೀಡಲಾಗಿದೆ. ಐಪಿಎಲ್ 14 ನೇ ಆವೃತ್ತಿಯ ಟ್ರೋಪಿ ಗೆದ್ದ ಸಿಎಸ್ ಕೆ ತಂಡ ನಾಯಕ ಎಂ.ಎಸ್.ಧೋನಿ ಎರಡನೇ ಮಗುವಿಗೆ ತಂದೆಯಾಗುವ ಖುಷಿಯಲ್ಲಿದ್ದಾರೆ.
ಹೌದು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 4ನೇ ಬಾರಿ ಐಪಿಎಲ್ ಪ್ರಶಸ್ತಿ ಗೆಲ್ಲಿಸಿಕೊಟ್ಟ ಬೆನ್ನಲ್ಲೇ ಮಹೇಂದ್ರ ಸಿಂಗ್ ಧೋನಿ, ಅಭಿಮಾನಿಗಳಿಗೆ ಮತ್ತೊಂದು ಗುಡ್ನ್ಯೂಸ್ ನೀಡಿದ್ದಾರೆ. ಧೋನಿ ಪತ್ನಿ ಸಾಕ್ಷಿ 2ನೇ ಬಾರಿ ಗರ್ಭಿಣಿಯಾಗಿದ್ದು, 2022ರಲ್ಲಿ ಮಗುವಿಗೆ ಜನ್ಮ ನೀಡುವ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿ ಬಹಿರಂಗಗೊಂಡಿದೆ.
ಇನ್ನು ಸಾಕ್ಷಿ ಗರ್ಭಿನಿಯಾಗಿರುವ ಸಂಗತಿಯನ್ನು ಸುರೇಶ್ ರೈನಾ ಅವರ ಪತ್ನಿ ಪ್ರಿಯಾಂಕಾ ಚೌಧರಿ ಖಚಿತಪಡಿಸಿದ್ದಾರೆ. 2010ರ ಜುಲೈನಲ್ಲಿ ವಿವಾಹವಾಗಿದ್ದ ಧೋನಿ-ಸಾಕ್ಷಿಗೆ 2015ರಲ್ಲಿ ಪುತ್ರಿ ಝಿವಾ ಜನಿಸಿದ್ದಳು.
PublicNext
16/10/2021 08:19 pm