ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಹುಲ್ ಇಂಡಿಯನ್ ಕೋಚ್: ಸೌರವ್ ಮಾತಿಗೆ ಬೆಲೆಕೊಟ್ಟ ಗ್ರೇಟ್ ವಾಲ್

ನವದೆಹಲಿ: ಕ್ರಿಕೆಟರ್ ದಿ ಗ್ರೇಟ್ ವಾಲ್ ಮಿಸ್ಟರ್ ರಾಹುಲ್ ದ್ರಾವಿಡ್ ಒಂದ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಹೌದು.ಭಾರತೀಯ ಕ್ರಿಕೆಟ್ ತಂಡದ ಮುಂದಿನ ಕೋಚ್ ಆಗಲು ಒಪ್ಪಿದ್ದಾರೆ ರಾಹುಲ್ ದ್ರಾವಿಡ್.

ಈ ಬೆಳವಣಿಗೆ ಈಗ ಇಡೀ ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದೆ.ನಿನ್ನೆ ನಡೆದ ಐಪಿಎಲ್ ಕೊನೆ ಪಂದ್ಯದ ವೇಳೆ ಈ ಅಧಿಕೃತ ಸುದ್ದಿ ಹೊರ ಬಿದ್ದಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್ ಶಾ ಒಂದ್ ಮೀಟಿಂಗ್ ಮಾಡಿದರು. ಆ ಮೀಟಿಂಗ್ ಅಲ್ಲಿಯೇ ರಾಹುಲ್ ದ್ರಾವಿಡ್ ರನ್ನ ಇಂಡಿಯನ್ ಕ್ರಿಕೆಟ್ ತಂಡದ ಕೋಚ್ ಆಗುವಂತೆ ಮನವೊಲಿಸಿದ್ದಾರೆ. ರಾಹುಲ್ ದ್ರಾವಿಡ್ ಕೂಡ ಅಧಿಕೃತವಾಗಿ ಈ ಸುದ್ದಿ ಹೇಳಿಕೊಂಡಿದ್ದಾರೆ.ಟಿ-20 ವಿಶ್ವ ಕಪ್ ಬಳಿಕ ರಾಹುಲ್ ದ್ರಾವಿಡ್ ಭಾರತೀಯ ಕ್ರಿಕೆಟ್ ತಂಡದ ತರಬೇತುದಾರ ಆಗಲಿದ್ದಾರೆ.

Edited By :
PublicNext

PublicNext

16/10/2021 01:40 pm

Cinque Terre

47.59 K

Cinque Terre

2

ಸಂಬಂಧಿತ ಸುದ್ದಿ