ದುಬೈ: ಫಾಫ್ ಡು ಪ್ಲೆಸಿಸ್ ಅಬ್ಬರದ ಅರ್ಧ ಶತಕ, ಋತುರಾಜ್ ಗಾಯಕವಾಡ್, ರಾಬಿನ್ ಉತ್ತಪ್ಪ ಹಾಗೂ ಮೊಯೀನ್ ಅಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್‌ಗೆ 193 ರನ್‌ಗಳ ಗುರಿ ನೀಡಿದೆ.
ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರು ಐಪಿಎಲ್ 14ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ನಾಯಕ ಇಯಾನ್ ಮಾರ್ಗನ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡವು 3 ವಿಕೆಟ್ ನಷ್ಟಕ್ಕೆ 192 ರನ್‌ಗಳ ಬೃಹತ್ ಮೊತ್ತದ ಗುರಿ ನೀಡಿದೆ.
ಚೆನ್ನೈ ಪರ ಫಾಫ್ ಡು ಪ್ಲೆಸಿಸ್ 86 ರನ್, ಋತುರಾಜ್ ಗಾಯಕವಾಡ್ 32 ರನ್, ರಾಬಿನ್ ಉತ್ತಪ್ಪ 31 ರನ್ ಹಾಗೂ ಮೊಯೀನ್ ಅಲಿ 37 ರನ್ ಚಚ್ಚಿದರು. ಇನ್ನು ಕೆಕೆಆರ್ ಪರ ಸುನಿಲ್ ನರೈನ್ 2 ವಿಕೆಟ್ ಉರುಳಿಸಿದರೆ, ಶಿವಂ ಮಾವಿ ಒಂದು ವಿಕೆಟ್ ಕಿತ್ತರು.
PublicNext
15/10/2021 09:20 pm