ಶಾರ್ಜಾ: ಐಪಿಎಲ್ 14 ನೇ ಆವೃತ್ತಿಯಲ್ಲಿ ನಿನ್ನೆ (ಸೋಮವಾರ) ನಡೆದ ಟೂರ್ನಿಯ ನಿರ್ಣಾಯಕ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ಸೋತ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ನಾಯಕ ವಿರಾಟ್ ಕೊಹ್ಲಿ ಭಾವುಕರಾಗಿ ಕಣ್ಣೀರಿಟ್ಟ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಾಯಕನಾಗಿ ಕೊಹ್ಲಿ ಅವರಿಗೆ ಇದು ಕೊನೆಯ ಐಪಿಎಲ್ ಟೂರ್ನಿಯಾಗಿದೆ. ಈ ಬಾರಿ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಳ್ಳುವ ಮೂಲಕ ಕೊಹ್ಲಿ ಅವರಿಗೆ ನಾಯಕತ್ವದಿಂದ ವಿದಾಯ ಹೇಳಬೇಕೆಂದುಕೊಂಡಿದ್ದ ಆರ್ ಸಿಬಿಗೆ ಕೆಕೆಆರ್ ನ ಅವಕಾಶ ನೀಡಿಲ್ಲ.
ಕೆಕೆಆರ್ ಪರ ಸುನಿಲ್ ನರೈನ್ ಭರ್ಜರಿ ಆಟ ಆರ್ ಸಿಬಿ ಗೆ ಆಘಾತ ನೀಡಿದ್ದರು. 4 ವಿಕೆಟ್ ಗಳಿಸುವ ಮೂಲಕ ಆರ್ ಸಿಬಿ ಬ್ಯಾಟಿಂಗ್ ಗೆ ಬ್ರೇಕ್ ಹಾಕಿದ್ದ ನರೈನ್ ಬ್ಯಾಟಿಂಗ್ ನಲ್ಲೂ ಮಿಂಚಿದ್ದರು.
ಹ್ಯಾಟ್ರಿಕ್ ಸಿಕ್ಸ್ ಸೇರಿದಂತೆ 26 ರನ್ ಗಳಿಸಿ ಆರ್ ಸಿಬಿ ಗೆಲುವಿಗೆ ತಡೆಯೊಡ್ಡಿದ್ದರು. ಪರಿಣಾಮವಾಗಿ ಕೆಕೆಆರ್ ನಾಲ್ಕು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿತ್ತು. ಪಂದ್ಯದ ಬಳಿಕ ಸಹ ಆಟಗಾರರ ಜತೆ ಸೇರಿ ಮಾತನಾಡುತ್ತಿದ್ದ ವೇಳೆ ಭಾವುಕರಾದ ಕೊಹ್ಲಿ ಮೈದಾನದಲ್ಲೇ ಕಣ್ಣೀರಿಟ್ಟು ಅಳುತ್ತಿದ್ದ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.
PublicNext
12/10/2021 01:54 pm