ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡೆಲ್ಲಿ ವಿರುದ್ಧದ ನಿನ್ನೆಯ ಪಂದ್ಯದಲ್ಲಿ ಶ್ರೀಕರ್ ಭರತ್ ಗಳಿಸಿದ ಹಣವೆಷ್ಟು ಗೊತ್ತಾ?

ಅಬುಧಾಬಿ: ಆಂಧ್ರಪ್ರದೇಶದ ವೈಜಾಗ್ ಮೂಲದ ಕೆ ಎಸ್ ಭರತ್ ಅವರನ್ನು ಇದೇ ವರ್ಷದ ಆರಂಭದಲ್ಲಿ ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೇವಲ 20 ಲಕ್ಷ ರೂಪಾಯಿಗಳನ್ನು ನೀಡಿ ಖರೀದಿಸಿತ್ತು. ಹೀಗೆ ಅಲ್ಪ ಮೊತ್ತಕ್ಕೆ ಆರ್‌ಸಿಬಿ ತಂಡದ ಪಾಲಾಗಿದ್ದ ಈ ಯುವ ಕ್ರಿಕೆಟಿಗ ಇದೀಗ ತಂಡದ ದೊಡ್ಡ ಬ್ಯಾಟಿಂಗ್ ಆಸ್ತಿಯಾಗಿ ನಿಂತಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಿನ್ನೆ (ಅಕ್ಟೋಬರ್ 8ರಂದು) ನಡೆದ ಪಂದ್ಯದ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿ ಆರ್‌ಸಿಬಿಗೆ ರೋಚಕ ಗೆಲುವು ತಂದುಕೊಟ್ಟರು. ಅವರು 52 ಎಸೆತಗಳಿಗೆ ಅಜೇಯ 78 ರನ್ ( 3 ಬೌಂಡರಿ ಮತ್ತು 4 ಸಿಕ್ಸರ್) ಸಿಡಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಹೀಗೆ ಉತ್ತಮ ಆಟವನ್ನು ಆಡುವ ಮೂಲಕ ಜಯ ತಂದುಕೊಟ್ಟ ಶ್ರೀಕರ್ ಭರತ್ ಅವರಿಗೆ ಈ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ದೊರಕಿತು. ಅಷ್ಟೇ ಅಲ್ಲದೆ ಡ್ರೀಮ್ ಇಲೆವೆನ್ ಗೇಮ್ ಚೇಂಜರ್ ಆಫ್ ದಿ ಮ್ಯಾಚ್ ಆಗಿದ್ದಕ್ಕೆ 1 ಲಕ್ಷ ರೂ., ಮೋಸ್ಟ್ ವ್ಯಾಲ್ಯುಯೆಬಲ್ ಪ್ಲೇಯರ್ ಆಫ್ ದ ಮ್ಯಾಚ್ 1 ಲಕ್ಷ ರೂ. ಮತ್ತು ಅನ್ ಅಕಾಡೆಮಿ ಕ್ರ್ಯಾಕಿಂಗ್ ಸಿಕ್ಸರ್ ಬಾರಿಸಿದ್ದಕ್ಕೆ 1 ಲಕ್ಷ ರೂಪಾಯಿಗಳನ್ನು ಕೆ.ಎಸ್ ಭರತ್ ಬಾಚಿಕೊಂಡಿದ್ದಾರೆ.

Edited By : Vijay Kumar
PublicNext

PublicNext

09/10/2021 08:28 pm

Cinque Terre

104.44 K

Cinque Terre

0

ಸಂಬಂಧಿತ ಸುದ್ದಿ