ಇಟಾನಗರ: ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡುಮಕ್ಕಳ ಜೊತೆಗೆ ಮಕ್ಕಳಾಗಿ ಇವತ್ತಿನ ದಿನವನ್ನ ಅದ್ಭುತವಾಗಿಯೆ ಆರಂಭಿಸಿದ್ದಾರೆ. ಅರುಣಾಚಲ ಪ್ರದೇಶದಿಂದ ಬಂದಿದ್ದ ಯುವ ಬ್ಯಾಡ್ಮಿಂಟನ್ ಆಟಗಾರರ ಜೊತೆಗೆ ಆಟ ಆಡಿದ್ದಾರೆ. ಅಷ್ಟೇ ಅಲ್ಲ ತಮ್ಮ ಆಟದ ಒಂದಷ್ಟು ಫೋಟೋಗಳನ್ನೂ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಎಂ.ವೆಂಕಯ್ಯ ನಾಯ್ಡು ಇವತ್ತು ರಿಫ್ರೆಶಿಂಗ್ ಮೂಡ್ ಅಲ್ಲಿಯೇ ಇದ್ದಾರೆ. ಅರುಣಾ ಚಲಪ್ರದೇಶದಿಂದ ಬಂದ ಮಕ್ಕಳ ಜೊತೆಗೆ ಇಟಾನಗರದ ರಾಜಭವನದಲ್ಲಿ ಬ್ಯಾಡ್ಮಿಂಟನ್ ಆಡಿದ್ದಾರೆ. ತಮ್ಮ ಈ ಕ್ಷಣದ ಉತ್ಸಾಹಿ ಅನುಭವದ ಬಗ್ಗೆ ಹೇಳಿಕೊಂಡು,ಒಂದಷ್ಟು ಫೋಟೋಗಳನ್ನ ತಮ್ಮ ಅಧಿಕೃತ ಟ್ವಿಟರ್ ಪೇಜ್ ಅಲ್ಲೂ ಹಂಚಿಕೊಂಡಿದ್ದಾರೆ.
PublicNext
09/10/2021 11:55 am