ದುಬೈ: ಬಹುನಿರೀಕ್ಷಿತ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯು ಯುಎಇ ಮತ್ತು ಓಮನ್ನಲ್ಲಿ ಇದೇ ಅಕ್ಟೋಬರ್ 17ರಿಂದ ಆರಂಭವಾಗಲಿದೆ. ಪಂದ್ಯ ವೀಕ್ಷಣೆಗೆ ಶೇಕಡಾ 70 ಪ್ರೇಕ್ಷಕರನ್ನು ಕ್ರೀಡಾಂಗಣದಲ್ಲಿ ಅನುಮತಿಸಲಾಗಿದೆ. ಇದರೊಂದಿಗೆ ಆನ್‌ಲೈನ್ ಟಿಕೆಟ್‌ಗಳ ಮಾರಾಟವನ್ನು ಆರಂಭಿಸಲಾಗಿದೆ ಎಂದು ಹೇಳಿದೆ.
ಅಕ್ಟೋಬರ್ 24ರಂದು ಕ್ರಿಕೆಟ್ ಜಗತ್ತಿನ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವೆ ಮುಖಾಮುಖಿಯಾಗಿವೆ. ಈ ಪಂದ್ಯವನ್ನು ಸ್ಟೇಡಿಯಂನಲ್ಲಿಯೇ ವೀಕ್ಷಣೆ ಮಾಡಲು ಎಲ್ಲರೂ ಕಾತುರರಾಗಿದ್ದಾರೆ. ಆದರೆ ಟಿಕೆಟ್ ಮಾರಾಟ ಆರಂಭಿಸಿದ ಕೇವಲ 1 ಗಂಟೆಯ ಒಳಗಾಗಿ ಎಲ್ಲವೂ ಸೋಲ್ಡ್ ಔಟ್ ಆಗಿವೆ. ಹೀಗಾಗಿ ಕೆಲ ನೆಟ್ಟಿಗರು, "ಯಾರ ಬಳಿಯಾದರೂ ಭಾರತ- ಪಾಕಿಸ್ತಾನ ನಡುವಿನ ಪಂದ್ಯದ ಟಿಕೆಟ್ ಇದ್ದು ಮಾರಾಟ ಮಾಡಲು ಬಯಸಿದರೆ ದಯವಿಟ್ಟು ತಿಳಿಸಿ" ಎಂದು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿಕೊಂಡಿದ್ದಾರೆ.
PublicNext
05/10/2021 01:01 pm