ದುಬೈ: ಐಪಿಎಲ್ ೧೪ನೇ ಆವೃತ್ತಿಯ 50ನೇ ಪಂದ್ಯವು ಇಂದು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡೆಯಲಿದೆ. ಈ ಮೂಲಕ ಎಂ.ಎಸ್. ಧೋನಿ ಮತ್ತು ಅವರ ‘ಶಿಷ್ಯ’ ರಿಷಭ್ ಪಂತ್ ಮುಖಾಮುಖಿಯಾಗಲಿದ್ದಾರೆ.
ಅಂಕಪಟ್ಟಿಯಲ್ಲಿ ಸಿಎಸ್‌ಕೆ ಸದ್ಯ ಮೊದಲ ಸ್ಥಾನದಲ್ಲಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ಎರಡನೇ ಸ್ಥಾನದಲ್ಲಿದೆ. ಇಂದಿನ ಪಂದ್ಯದಲ್ಲಿ ಗೆಲುವು ಸಾಧಿರುವ ತಂಡವು ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಲಿದೆ. ಈಗಾಗಲೇ ಪ್ಲೇ ಆಫ್ ಪ್ರವೇಶಿಸಿರುವ ಉಭಯ ತಂಡಗಳಿಗೆ ಒತ್ತಡ ಇಲ್ಲ.
ತಂಡಗಳು:
ಚೆನ್ನೈ ಸೂಪರ್ ಕಿಂಗ್ಸ್ ಸಂಭಾವ್ಯ ತಂಡ: ಮಹೇಂದ್ರಸಿಂಗ್ ಧೋನಿ (ನಾಯಕ), ಋತುರಾಜ್ ಗಾಯಕವಾಡ್, ಫಫ್ ಡುಪ್ಲೆಸಿ, ಅಂಬಟಿ ರಾಯುಡು, ಸುರೇಶ್ ರೈನಾ, ಡ್ವೆನ್ ಬ್ರಾವೊ, ರವೀಂದ್ರ ಜಡೇಜ, ದೀಪಕ್ ಚಾಹರ್, ಶಾರ್ದೂಲ್ ಠಾಕೂರ್, ಸ್ಯಾಮ್ ಕರನ್, ಮೋಯಿನ್ ಅಲಿ, ಕೆ. ಗೌತಮ್, ಕರ್ಣ ಶರ್ಮಾ, ಇಮ್ರಾನ್ ತಾಹೀರ್.
ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ತಂಡ: ರಿಷಭ್ ಪಂತ್ (ನಾಯಕ), ಶಿಖರ್ ಧವನ್, ಶಿಮ್ರೊನ್ ಹೆಟ್ಮೆಯರ್, ಪೃಥ್ವಿ ಶಾ, ಶ್ರೇಯಸ್ ಅಯ್ಯರ್, ಸ್ಟೀವ್ ಸ್ಮಿತ್, ಎನ್ರಿಚ್ ನಾರ್ಕಿಯಾ, ಆವೇಶ್ ಖಾನ್, ಕಗಿಸೊ ರಬಾಡ, ಇಶಾಂತ್ ಶರ್ಮಾ, ಆಕ್ಷರ್ ಪಟೇಲ್, ಮಾರ್ಕಸ್ ಸ್ಟೋಯಿನಿಸ್, ಆರ್. ಅಶ್ವಿನ್, ಕುಲವಂತ್ ಖೆಜ್ರೊಲಿಯಾ. ಸ್ಯಾಮ್ ಬಿಲಿಂಗ್ಸ್.
PublicNext
04/10/2021 02:58 pm