ಶಾರ್ಜಾ: ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ (ಅಕ್ಟೋಬರ್ 3) ನಡೆದ ಐಪಿಎಲ್ 14ನೇ ಆವೃತ್ತಿಯ 48ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಆರ್‌ಸಿಬಿಯ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಾಲ್ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದರು.
ಚಹಾಲ್ ಅವರು ಮಯಾಂಕ್ ಅಗರ್ವಾಲ್ ಮತ್ತು ಸರ್ಫರಾಜ್ ಖಾನ್ ಅವರಿಬ್ಬರನ್ನು ಕೆಲವೇ ಬಾಲ್ಗಳ ಅಂತರದಲ್ಲಿ ಔಟ್ ಮಾಡಿದರು. ಸರ್ಫರಾಜ್ ಖಾನ್ ಅವರ ವಿಕೆಟ್ ಪಡೆದ ಎಸೆತವು ಮ್ಯಾಜಿಕ್ ಸ್ಪಿನ್ ಆಗಿತ್ತು. ಚಹಾಲ್ ಬೌಲ್ ಮಾಡಿದ ಚೆಂಡು ಲೆಗ್ ಸ್ಟಂಪ್ ಆಚೆ ಪಿಚ್ ಆಗಿ ಭಾರೀ ತಿರುವು ಪಡೆದ ಆಫ್ ಸ್ಟಂಪ್ ಎಗರಿಸಿತು. ಇದರಿಂದಾಗಿ ಬ್ಯಾಟಿಂಗ್ ಮಾಡುತ್ತಿದ್ದ ಸರ್ಫರಾಜ್ ಅಕ್ಷರಶಃ ಕಕ್ಕಾಬಿಕ್ಕಿಯಾದರು. ಚೆಂಡು ಎಲ್ಲಿಂದ ಎಲ್ಲಿಗೆ ಹೋಯಿತು ಎಂದು ಗೊತ್ತಾಗದೇ ಸರ್ಫರಾಜ್ ಗರಬಡಿದುಹೋದರು. ಸ್ಪಿನ್ ಮಾಂತ್ರಿ ಶೇನ್ ವಾರ್ನ್ ಅವರ ಶತಮಾನದ ಮ್ಯಾಜಿಕ್ ಬಾಲನ್ನು ಇದು ನೆನಪಿಸುವಂತಿತ್ತು.
PublicNext
04/10/2021 08:07 am