ದುಬೈ: ಶುಭ್ಮನ್ ಗಿಲ್ ಸಮಯೋಚಿತ ಅರ್ಧಶತಕ, ನಿತೀಶ್ ರಾಣಾ ಸಾಥ್‌ನಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 6 ವಿಕೆಟ್‌ಗಳಿಂದ ಗೆಲುವು ಸಾಧಿಸಿದೆ.
ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 14ನೇ ಆವೃತ್ತಿಯ 49ನೇ ಪಂದ್ಯದಲ್ಲಿ ಟಾಸ್ ಗೆದ್ದ ಹೈದರಾಬಾದ್ ತಂಡವು ಮೊದಲು ಬ್ಯಾಟಿಂಗ್ ಮಾಡಿ 116 ರನ್‌ಗಳ ಸಾಧಾರಣ ಮೊತ್ತದ ಗುರಿ ನೀಡಿತ್ತು. ಈ ಟಾರ್ಗೆಟ್ ಬೆನ್ನತ್ತಿದ ಕೋಲ್ಕತ್ತಾ ತಂಡವು 2 ಎಸೆತಗಳು ಬಾಕಿ ಇರುವಂತೆ 4 ವಿಕೆಟ್ ನಷ್ಟಕ್ಕೆ 119 ರನ್ ಗಳಿಸಿ ಗೆಲುವು ದಾಖಲಿಸಿದೆ. ಕೋಲ್ಕತ್ತಾ ಪರ ಶುಭ್ಮನ್ ಗಿಲ್ 57 ರನ್ ಹಾಗೂ ನಿತೀಶ್ ರಾಣಾ 25 ರನ್ ಗಳಿಸಿದರು.
ಇನ್ನು ಹೈದರಾಬಾದ್ ತಂಡ ಪರ ಜೇಸನ್ ಹೋಲ್ಡರ್ 2 ವಿಕೆಟ್ ಹಾಗೂ ಸಿದ್ದಾರ್ಥ್ ಕೌಲ್, ರಶೀದ್ ಖಾನ್ ತಲಾ ಒಂದು ವಿಕೆಟ್ ಉರುಳಿಸಿದರು.
ಇದಕ್ಕೂ ಹೈದರಾಬಾದ್ ತಂಡವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 115 ರನ್ ಗಳಿಸಲು ಶಕ್ತವಾಗಿತ್ತು. ತಂಡದ ಪರ ನಾಯಕ ಕೇನ್ ವಿಲಿಯಮ್ಸನ್ 26 ರನ್, ಪ್ರಿಯಂ ಗರ್ಗ್ 21 ರನ್ ಹಾಗೂ ಅಬ್ದುಲ್ ಸಮದ್ 25 ರನ್ ಗಳಿಸಿದ್ದರು. ಇನ್ನು ಕೋಲ್ಕತ್ತಾ ಪರ ಟಿಮ್ ಸೌಥಿ, ಶಿವಂ ಮಾವಿ, ವರುಣ್ ಚಕ್ರವರ್ತಿ ತಲಾ 2 ವಿಕೆಟ್ ಉರುಳಿಸಿದರೆ, ಶಕೀಬ್ ಅಲ್ ಹಸನ್ ಒಂದು ವಿಕೆಟ್ ಕಿತ್ತು ತಂಡಕ್ಕೆ ಆಸರೆಯಾಗಿದ್ದರು.
PublicNext
03/10/2021 11:01 pm