ಶಾರ್ಜಾ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ನಡೆಯುತ್ತಿರುವ ಐಪಿಎಲ್ 14ನೇ ಆವೃತ್ತಿಯ 48ನೇ ಪಂದ್ಯದಲ್ಲಿ ಅಂಪೈರಿಂಗ್ ವಿವಾದ ಚರ್ಚೆಗೀಡಾಗಿದೆ.
ಆರ್‌ಸಿಬಿ ಇನ್ನಿಂಗ್ಸ್‌ನ 8ನೇ ಓವರ್‌ನಲ್ಲಿ ಬ್ಯಾಟರ್ ದೇವದತ್ ಪಡಿಕ್ಕಲ್ ಔಟ್ ನೀಡದಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಟ್ವಿಟರ್‌ನಲ್ಲಿ ಅನೇಕರು ಥರ್ಡ್ ಅಂಪೈರ್ ಅನ್ನು ತೆಗೆದು ಹಾಕಿ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ರವಿ ಬಿಷ್ಣೋಯ್ ಬೌಲಿಂಗ್ ವೇಳೆ ಸ್ಟ್ರೈಕ್‌ನಲ್ಲಿದ್ದ ದೇವದತ್ ಪಡಿಕ್ಕಲ್ ಬ್ಯಾಟ್ ಹತ್ತಿರದಿಂದ ಪಾಸ್ ಆದ ಚೆಂಡು ವಿಕೆಟ್ ಕೀಪರ್ ಕೆಎಲ್ ರಾಹುಲ್ ಕೈ ಸೇರಿತ್ತು. ಇದು ಔಟ್ ಎಂದು ಪಂಜಾಬ್ ನಾಯಕ ಕೆ.ಎಲ್ ರಾಹುಲ್ ಅಂಪೈರ್‌ಗೆ ಮನವಿ ಸಲ್ಲಿಸಿದರು. ಆದರೆ ಆನ್ ಫೀಲ್ಡ್ ಅಂಪೈರ್ ನಾಟ್ ಔಟ್ ತೀರ್ಪು ನೀಡಿದರು. ಆಗ ಡಿಸಿಶನ್ ರಿವ್ಯೂಗಾಗಿ ಆನ್ ಫೀಲ್ಡ್ ಅಂಪೈರ್ ಅವರಲ್ಲಿ ಕೋರಿಕೊಂಡರು. ಡಿಆರ್‌ಎಸ್‌ನಲ್ಲಿ ಪಡಿಕ್ಕಲ್ ಬ್ಯಾಟ್ ತಾಗಿದ್ದು ಕಾಣಿಸಿತ್ತು. ಆದರೂ ಥರ್ಡ್ ಅಂಪೈರ್ ಕ್ರಿಷ್ಣಮಾಚಾರಿ ಶ್ರೀನಿವಾಸನ್ ನಾಟ್ ಔಟ್ ತೀರ್ಪು ನೀಡಿದರು. ಹೀಗಾಗಿ ಆನ್ ಫೀಲ್ಡ್ ಅಂಪೈರ್ ಅನಂತ ಪದ್ಮನಾಭನ್ ಕೂಡ ನಾಟ್ ಔಟ್ ಎಂದು ಕೈ ಸನ್ನೆ ಮಾಡಿದರು. ಪಂಜಾಬ್ ಕಿಂಗ್ಸ್ ಇದರಿಂದಾಗಿ ಒಂದು ರಿವ್ಯೂ ಕೂಡ ಕಳೆದುಕೊಂಡಿತು. ಅತ್ತ ಆರ್‌ಸಿಬಿ ಬ್ಯಾಟರ್ ಔಟ್ ಕೂಡ ಆಗದ್ದು ನೋಡಿ ರಾಹುಲ್ ತನ್ನ ಅಸಮಾಧಾನವನ್ನು ಅಂಪೈರ್ ಅವರೆದು ತೋರಿಕೊಂಡರು. ಆದರೆ ಥರ್ಡ್ ಅಂಪೈರ್ ತೀರ್ಪು ಅದಾಗಿದ್ದರಿಂದ ಆನ್ ಫೀಲ್ಡ್ ಅಂಪೈರ್ ಏನೂ ಮಾಡಲಾಗಲಿಲ್ಲ. ಮೊದಲ ಇನ್ನಿಂಗ್ಸ್‌ನಲ್ಲಿ ಆರ್‌ಸಿಬಿ 164 ರನ್ ಬಾರಿಸಿದೆ.
ತೀರ್ಪಿನ ಬಗ್ಗೆ ನೆಟ್ಟಿಗರು ಅಸಮಾಧಾನ ಹೊರ ಹಾಕಿದ್ದಾರೆ. "ಈ ಕೂಡಲೇ ಥರ್ಡ್ ಅಂಪೈರ್ ಅನ್ನು ಕಿತ್ತು ಹಾಕಿ. ಔಟ್ ಇದ್ದರೂ ನಾಟ್ ಔಟ್ ತೀರ್ಪು ನೀಡಿದ್ದಾರೆ. ಏನ್ ಜೋಕಿದು" ಎಂದು ನೆಟ್ಟಿಗರೊಬ್ಬರು ಕಿಡಿಕಾರಿದ್ದಾರೆ.
PublicNext
03/10/2021 06:13 pm