ದುಬೈ: ಚೆನ್ನೈ ಬೌಲರ್‌ಗಳ ವಿರುದ್ಧ ಭರ್ಜರಿ ಬ್ಯಾಟಿಂಗ್ ಮಾಡಿದ ಆಲ್‍ರೌಂಡರ್ ಶಿವಂ ದುಬೆ ರಾಜಸ್ಥಾನ ರಾಯಲ್ಸ್ ತಂಡಕ್ಕೆ 7 ವಿಕೆಟ್‍ಗಳ ಭರ್ಜರಿ ಜಯ ತಂದುಕೊಟ್ಟಿದ್ದಾರೆ. ಈ ಗೆಲುವಿನೊಂದಿಗೆ ರಾಜಸ್ಥಾನ ತಂಡ ಫ್ಲೇ ಆಫ್ ಆಸೆಯನ್ನು ಉಳಿಸಿಕೊಂಡಿದೆ.
ಸಿಎಸ್‌ಕೆ ನೀಡಿದ 190ರನ್‍ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ ತಂಡ ಆರಂಭದಿಂದಲೇ ಭರ್ಜರಿ ಬ್ಯಾಟಿಂಗ್ ಮಾಡಲು ಮುಂದಾಯಿತು. ಎವಿನ್ ಲೂಯಿಸ್ 27ರನ್(12 ಎಸೆತ, 2 ಬೌಂಡರಿ, 2 ಸಿಕ್ಸ್) ಮತ್ತು ಯಶಸ್ವಿ ಜೈಸ್ವಾಲ್ 50ರನ್(21 ಎಸೆತ, 6 ಬೌಂಡರಿ, 3 ಸಿಕ್ಸ್) ಸಿಡಿಸಿ ಘರ್ಜಿಸಿದರು. ಇವರ ನಿರ್ಗಮನದ ಬಳಿಕ ಬಂದ ಶಿವಂ ದುಬೆ ಚೆನ್ನೈ ಬೌಲರ್‌ಗಳಿಗೆ ಅಷ್ಟ ದಿಕ್ಕಿನ ಪರಿಚಯ ಮಾಡಿಸಿದರು. ಸಿಕ್ಸರ್, ಬೌಂಡರಿಗಳನ್ನು ಸಾಲು ಸಾಲು ಹೊಡೆದು ರಾಜಸ್ಥಾನ ತಂಡಕ್ಕೆ ಜಯ ತಂದುಕೊಂಡರು. ದುಬೆ 64ರನ್(42 ಎಸೆತ, 4 ಬೌಂಡರಿ, 2 ಸಿಕ್ಸ್) ಸಿಡಿಸಿ ಔಟ್ ಆಗದೇಉಳಿದು ತಂಡದ ಗೆಲುವಿಗೆ ಕಾರಣರಾದರು.
PublicNext
03/10/2021 12:17 am