ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಶ್ವಿನ್ ಜೊತೆಗಿನ ಕಿರಿಕ್: ಕಾರಣ ನೀಡಿದ ಐಯಾನ್ ಮಾರ್ಗನ್‌

ಶಾರ್ಜಾ: ಐಪಿಎಲ್ 14ನೇ ಆವೃತ್ತಿಯ ಭಾಗವಾಗಿ ನಿನ್ನೆ ನಡೆದ 41ನೇ ಪಂದ್ಯದ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅನುಭವಿ ಆಟಗಾರ ಆರ್‌ ಅಶ್ವಿನ್ ಅವರೊಂದಿಗೆ ನಡೆದಿದ್ದ ಮಾತಿನ ಚಕಮಕಿ ಬಗ್ಗೆ ಕೋಲ್ಕತ್ತಾ ನೈಟ್‌ ರೈಡರ್ಸ್ ನಾಯಕ ಐಯಾನ್ ಮಾರ್ಗನ್‌ ಪ್ರತಿಕ್ರಿಯಿಸಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ಇನ್ನಿಂಗ್ಸ್‌ನ 20ನೇ ಓವರ್‌ ಮೊದಲನೇ ಎಸೆತದಲ್ಲಿ ಆರ್‌ ಅಶ್ವಿನ್‌, ಟಿಮ್‌ ಸೌಥಿ ಎಸೆತದಲ್ಲಿ ನಿತೀಶ್ ರಾಣಾಗೆ ಸುಲಭ ಕ್ಯಾಚ್‌ ನೀಡಿದ್ದರು. ಈ ವೇಳೆ ಅಶ್ವಿನ್ ಸಂಭ್ರಮದಲ್ಲಿದ್ದ ಸೌಥಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ ಐಯಾನ್ ಮಾರ್ಗನ್‌ ಪಿಚ್ ಬಳಿ ಬಂದು ಅಶ್ವಿನ್‌ಗೆ ತಿರುಗೇಟು ನೀಡಿದರು. ಈ ವೇಳೆ ಅಶ್ವಿನ್ ಹಾಗೂ ಮಾರ್ಗನ್‌ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ದಿನೇಶ್‌ ಕಾರ್ತಿಕ್‌ ಮಧ್ಯ ಪ್ರವೇಶಿಸಿ ಆರ್‌ ಅಶ್ವಿನ್ ಅವರನ್ನು ಸಮಾಧಾನ ಪಡಿಸಿ ಪರಿಸ್ಥಿತಿಯನ್ನು ಸರಿದೂಗಿಸಿದ್ದರು.

ಈ ಬಗ್ಗೆ ವಿವರಣೆ ನೀಡಿರುವ ಐಯಾನ್ ಮಾರ್ಗನ್, "ಪಂದ್ಯದಲ್ಲಿ ಎರಡೂ ತಂಡಗಳಿಂದ ಕಠಿಣ ಪೈಪೋಟಿ ನಡೆಯುತ್ತಿತ್ತು. ಬಿಸಿ ದಿನಗಳಲ್ಲಿ ಸಂಗತಿಗಳು ಕುದಿಯಬಹುದು. ಇದರ ನಡುವೆ ಇಂತಹ ಘಟನೆಗಳು ನಡೆಯುವುದು ಸಾಮಾನ್ಯ. ಅದೃಷ್ಟವಶಾತ್‌ ಇದು ನಡೆಯಲಿಲ್ಲ. ಆದರೆ ನಾವೆಲ್ಲರೂ ಕ್ರೀಡಾ ಸ್ಫೂರ್ತಿಯೊಂದಿಗೆ ಆಡಿದ್ದೇವೆ" ಎಂದು ಮಾರ್ಗನ್‌ ಸ್ಪಷ್ಟಪಡಿಸಿದ್ದಾರೆ.

Edited By : Vijay Kumar
PublicNext

PublicNext

29/09/2021 02:55 pm

Cinque Terre

62.22 K

Cinque Terre

0

ಸಂಬಂಧಿತ ಸುದ್ದಿ