ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IPL 2021: ಪಂಜಾಬ್ ಕಿಂಗ್ಸ್ ವಿರುದ್ಧ ಟಾಸ್ ಗೆದ್ದ ಮುಂಬೈ ಬೌಲಿಂಗ್ ಆಯ್ಕೆ

ಅಬು ಧಾಬಿ : IPL 2021ರ 42ನೇ ಲೀಗ್ ಪಂದ್ಯ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ಎರಡೂ ತಂಡಕ್ಕೂ ಗೆಲುವು ಅನಿವಾರ್ಯವಾಗಿದೆ. ಈ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದಿರುವ ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಮುಂಬೈ ಇಂಡಿಯನ್ಸ್ ತಂಡದಲ್ಲಿ 2 ಬದಲಾವಣೆ ಮಾಡಲಾಗಿದೆ. ಇಶಾನ್ ಕಿಶನ್ ಬದಲು ಸೌರಬ್ ತಿವಾರಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮಿಲ್ನೆ ಬದಲು ನಥನ್ ಕೌಲ್ಟರ್ ನೈಲ್ ಸ್ಥಾನ ಪಡೆದಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡ:

ರೋಹಿತ್ ಶರ್ಮಾ, ಕ್ವಿಂಟನ್ ಡಿಕಾಕ್, ಸೂರ್ಯಕುಮಾರ್ ಯಾದವ್, ಸೌರವ್ ತಿವಾರಿ, ಕ್ರುನಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್. ನಥನ್ ಕೌಲ್ಟರ್ ನೈಲ್, ರಾಹುಲ್ ಚಹಾರ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್

ಪಂಜಾಬ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಮಯಾಂಕ್ ಅಗರ್ವಾಲ್ ಬದಲು ಮನ್ದೀಪ್ ಸಿಂಗ್ ತಂಡ ಸೇರಿಕೊಂಡಿದ್ದಾರೆ.

ಪಂಜಾಬ್ ತಂಡ:

ಕೆಎಲ್ ರಾಹುಲ್, ಮನ್ದೀಪ್ ಸಿಂಗ್, ಕ್ರಿಸ್ ಗೇಲ್ , ಆ್ಯಡಿನ್ ಮರ್ಕ್ರಾಮ್, ನಿಕೋಲಸ್ ಪೂರನ್, ದೀಪಕ್ ಹೂಡ, ಹರ್ಪ್ರೀತ್ ಬ್ರಾರ್, ನಥನ್ ಎಲ್ಲಿಸ್, ಮೊಹಮ್ಮದ್ ಶಮಿ, ರವಿ ಬಿಶ್ನೋಯ್, ಅರ್ಶದೀಪ್ ಸಿಂಗ್

ಉಭಯ ತಂಡಗಳಿಗೆ ಈ ಪಂದ್ಯದ ಗೆಲುವು ಅತೀ ಮುಖ್ಯವಾಗಿದೆ.

ಪಂಜಾಬ್ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಇತ್ತ ಮುಂಬೈ ಇಂಡಿಯನ್ಸ್ 7ನೇ ಸ್ಥಾನದಲ್ಲಿದೆ.

Edited By : Nirmala Aralikatti
PublicNext

PublicNext

28/09/2021 07:16 pm

Cinque Terre

101.15 K

Cinque Terre

0

ಸಂಬಂಧಿತ ಸುದ್ದಿ