ದುಬೈ: ನಾಯಕ ಸಂಜು ಸ್ಯಾಮ್ಸನ್ ಅರ್ಧಶತಕದ ಅಬ್ಬರ ಹಾಗೂ ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್ ಸಹಾಯದಿಂದ ರಾಜಸ್ಥಾನ್ ರಾಯಲ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್‌ಗೆ 165 ರನ್‌ಗಳ ಗುರಿ ನೀಡಿದೆ.
ಐಪಿಎಲ್ 14ನೇ ಆವೃತ್ತಿಯ ಭಾಗವಾಗಿ ದುಬೈಯಲ್ಲಿ ನಡೆಯುತ್ತಿರುವ 40ನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ತಂಡವು 5 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತು. ತಂಡದ ಪರ ನಾಯಕ ಸಂಜು ಸ್ಯಾಮ್ಸನ್ 82 ರನ್ (57 ಎಸೆತ, 7 ಬೌಂಡರಿ, 3 ಸಿಕ್ಸ್) ಯಶಸ್ವಿ ಜೈಸ್ವಾಲ್ 36 ರನ್, ಮಹಿಪಾಲ್ ಲೊಮರ್ ಅಜೇಯ 29 ರನ್ ಗಳಿಸಿದರು.
ಸನ್‌ರೈಸರ್ಸ್ ಹೈದರಾಬಾದ್ ಪರ ಸಿದ್ಧಾರ್ಥ್ ಕೌಲ್ ಎರಡು ವಿಕೆಟ್ ಪಡೆದರೆ, ಸಂದೀಪ್ ಶರ್ಮಾ, ಭುವನೇಶ್ವರ್ ಕುಮಾರ್ ಹಾಗೂ ರಶೀದ್ ಖಾನ್ ತಲಾ ಒಂದು ವಿಕೆಟ್ ಕಿತ್ತರು.
PublicNext
27/09/2021 09:14 pm