ದುಬೈ : ಇಲ್ಲಿನ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ಮಹತ್ವದ ಐಪಿಎಲ್ 2021ರ 40ನೇ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ಮತ್ತು ಕೇನ್ ವಿಲಿಯಮ್ಸನ್ ನೇತೃತ್ವದ ಸನ್ ರೈಸರ್ಸ್ ಹೈದ್ರಾಬಾದ್ ಮುಖಾಮುಖಿಯಾಗುತ್ತಿದೆ.
ಸತತ ಸೋಲುಗಳಿಂದ ಕಂಗೆಟ್ಟಿರುವ ಸನ್ ರೈಸರ್ಸ್ ಹೈದ್ರಾಬಾದ್ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಸನ್ ರೈಸರ್ಸ್ ತಂಡಕ್ಕೆ ಇಲ್ಲ. ಆದರೆ, ರಾಜಸ್ತಾನ ರಾಯಲ್ಸ್ ಪಾಲಿಗೆ ಪ್ಲೇ ಆಫ್ ತಲುಪಲು ಇಂದಿನ ಪಂದ್ಯದಲ್ಲಿ ಶತಾಯಗತಾಯ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಸಂಜು ಸ್ಯಾಮ್ಸನ್ ಪಡೆ ಮತ್ತಷ್ಟು ನಿಗಾವಹಿಸಿ ಆಡಬೇಕಾದ ಒತ್ತಡದಲ್ಲಿದೆ. ಇದೇ ಕಾರಣಕ್ಕೆ ಇಂದಿನ ಪಂದ್ಯ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.
ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್ (ನಾಯಕ), ಯಶಸ್ವಿ ಜೈಸ್ವಾಲ್, ಶ್ರೇಯಸ್ ಗೋಪಾಲ್, ಜಯದೇವ್ ಉನದ್ಕತ್, ಲಿಯಾಮ್ ಲಿವಿಂಗ್ಸ್ಟೋನ್, ಎವಿನ್ ಲೂಯಿಸ್, ಡೇವಿಡ್ ಮಿಲ್ಲರ್, ಕ್ರಿಸ್ ಮೊರಿಸ್, ಒಷೇನ್ ಥಾಮಸ್, ಮುಸ್ತಫಿಜುರ್ ರೆಹಮಾನ್, ತಬ್ರೇಜ್ ಶಮ್ಸಿ, ಚೇತನ್ ಸಕಾರಿಯಾ, ರಿಯಾನ್ ಪರಾಗ್, ಗ್ಲೆನ್ ಫಿಲಿಪ್ಸ್, ರಾಹುಲ್ ತೆವಾಟಿಯಾ, ಆಕಾಶ್ ಸಿಂಗ್, ಅನುಜಾ ರಾವತ್ ಶಿವಂ ದುಬೆ, ಮಹಿಪಾಲ್ ಲೊಮ್ರೊರ್, ಕುಲದೀಪ್ ಯಾದವ್.
ಸನ್ ರೈಸರ್ಸ್ ಹೈದರಾಬಾದ್: ಕೇನ್ ವಿಲಿಯಮ್ಸನ್ (ನಾಯಕ), ಡೇವಿಡ್ ವಾರ್ನರ್, ಮನೀಷ್ ಪಾಂಡೆ, ವೃದ್ಧಿಮಾನ್ ಸಹಾ, ಶ್ರೀವತ್ಸ ಗೋಸ್ವಾಮಿ, ರಶೀದ್ ಖಾನ್, ವಿಜಯಶಂಕರ್, ಮೊಹಮ್ಮದ್ ನಬಿ, ಜೇಸನ್ ರಾಯ್, ಮುಜೀಬ್ ಉರ್ ರೆಹಮಾನ್, ಜೆ. ಸುಚಿತ್, ಜೇಸನ್ ಹೋಲ್ಡರ್, ವಿರಾಟ್ ಸಿಂಗ್, ಪ್ರಿಯಂ ಗಾರ್ಗ್, ಖಲೀಲ್ ಅಹಮದ್, ಬಾಸಿಲ್ ತಂಪಿ, ಕೇದಾರ್ ಜಾಧವ್, ಭುವನೇಶ್ವರ್ ಕುಮಾರ್.
PublicNext
27/09/2021 02:44 pm