ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಫಾಫ್ ಡು ಪ್ಲೆಸಿ, ಗಾಯದ ನಡುವೆಯೂ ಬೌಂಡರಿ ಗೆರೆ ಬಳಿ ಹಿಡಿದ ಅದ್ಭುತ ಕ್ಯಾಚ್ ಎಲ್ಲರ ಮೆಚ್ಚುಗೆ ಗಳಿಸಿದೆ.
ಜೋಶ್ ಹೇಜಲ್ವುಡ್ ದಾಳಿಯಲ್ಲಿ ಕೆಕೆಆರ್ ನಾಯಕ ಏಯಾನ್ ಮಾರ್ಗನ್ ಹೊಡೆದ ಚೆಂಡನ್ನು ಹಿಡಿಯುವ ಮೂಲಕ ಡು ಪ್ಲೆಸಿ ಸಂಭ್ರಮಿಸಿದರು. ಈ ವೇಳೆ ಡು ಪ್ಲೆಸಿ ಮೊಣಕಾಲಿನಿಂದ ರಕ್ತ ಸುರಿಯುತ್ತಿತ್ತು. ಈ ದೃಶ್ಯ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಯಾಗಿದ್ದು, ಅಭಿಮಾನಿಗಳು ಡು ಪ್ಲೆಸಿ, ಅರ್ಪಣಾ ಮನೋಭಾವವನ್ನು ಶ್ಲಾಘಿಸಿದ್ದಾರೆ.
PublicNext
26/09/2021 08:53 pm