ಅಬುಧಾಬಿ: ರಾಹುಲ್ ತ್ರಿಪಾಠಿ ಸಮಯೋಚಿತ ಬ್ಯಾಟಿಂಗ್ ಸಹಾಯದಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ಗೆ 172 ರನ್‌ಗಳ ಗುರಿ ನೀಡಿದೆ. ಐಪಿಎಲ್ 14ನೇ ಆವೃತ್ತಿಯ ಭಾಗವಾಗಿ ಅಬುಧಾಬಿಯಲ್ಲಿ ನಡೆಯುತ್ತಿರುವ 38ನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ತಂಡವು 6 ವಿಕೆಟ್ ನಷ್ಟಕ್ಕೆ 171 ರನ್‌ಗಳನ್ನು ಗಳಿಸಿದೆ. ತಂಡದ ಪರ ರಾಹುಲ್ ತ್ರಿಪಾಠಿ 45 ರನ್, ನಿತೀಶ್ ರಾಣಾ ಅಜೇಯ 37 ರನ್ ಗಳಿಸಿದರು.
ಕೋಲ್ಕತ್ತಾ ತಂಡವು ಬ್ಯಾಟಿಂಗ್ ಆಯ್ಕೆಯನ್ನು ಸಮರ್ಥಿಸಿಕೊಳ್ಳಲು ಆರಂಭದಲ್ಲಿ ಹೆಣಗಾಡಿತು. ಶುಭ್ಮನ್ ಗಿಲ್ ಬಹುಬೇಗ (9 ರನ್‌ಗೆ) ವಿಕೆಟ್ ಒಪ್ಪಿಸಿದರು. ಬಳಿಕ ಮೈದಾನಕ್ಕಿಳಿದ ರಾಹುಲ್ ತ್ರಿಪಾಠಿ ಉತ್ತಮ ಇನ್ನಿಂಗ್ಸ್ ಕಟ್ಟಲು ವೆಂಕಟೇಶ್ ಅಯ್ಯರ್ ಗೆ ಸಾಥ್ ನೀಡಿದರು. ಈ ಜೋಡಿ ಎರಡನೇ ವಿಕೆಟ್ ನಷ್ಟಕ್ಕೆ 40 ರನ್‌ಗಳ ಜೊತೆಯಾಟದ ಕೊಡುಗೆ ನೀಡಿತು. ವೆಂಕಟೇಶ್ ಅಯ್ಯರ್ (18 ರನ್) ವಿಕೆಟ್ ಬೆನ್ನಲ್ಲೇ ಬ್ಯಾಟಿಂಗ್ ಗೆ ಇಳಿದ ನಾಯಕ ಇಯಾನ್ ಮಾರ್ಗನ್ 14 ಎಸೆತಗಳನ್ನು ಎದುರಿಸಿ ಕೇವಲ 8 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಈ ಮಧ್ಯೆ ಅರ್ಧಶತಕ ಸಂಭ್ರಮದ ಸನಿಹದಲ್ಲಿದ್ದ ರಾಹುಲ್ ತ್ರಿಪಾಠಿ ವಿಕೆಟ್ ಕಳೆದುಕೊಂಡರು. ಬಳಿಕ ಆಂಡ್ರೆ ರಸಲ್ 20 ರನ್, ದಿನೇಶ್ ಕಾರ್ತಿಕ್ 26 ರನ್ ಹಾಗೂ ನಿತೀಶ್ ರಾಣಾ ಅಜೇಯ 37 ರನ್ ಗಳಿಸಿದರು.
ಚೆನ್ನೈ ತಂಡದ ಪರ ಶಾರ್ದೂಲ್ ಠಾಕೂರ್ ಹಾಗೂ ಜೋಶ್ ಹ್ಯಾಝೆಲ್ವುಡ್ ತಲಾ ಎರಡು ವಿಕೆಟ್, ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ಪಡೆದರು.
ವಿಕೆಟ್ ಪತನವಾಗಿದ್ದು ಹೀಗೆ:
ಮೊದಲ ವಿಕೆಟ್‌ಗೆ: 10 ರನ್
ಎರಡನೇ ವಿಕೆಟ್: 50 ರನ್.
ಮೂರನೇ ವಿಕೆಟ್: 70 ರನ್
ನಾಲ್ಕನೇ ವಿಕೆಟ್: 89 ರನ್
ಐದನೇ ವಿಕೆಟ್: 125 ರನ್
ಆರನೇ ವಿಕೆಟ್: 166 ರನ್
PublicNext
26/09/2021 05:26 pm