ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹಣಕ್ಕಾಗಿ ಆಸಿಸ್ (ಆಸ್ಟ್ರೇಲಿಯನ್) ಆಟಗಾರರು ತಮ್ಮ ಡಿಎನ್‌ಎ ಕೂಡ ಬದಲಿಸಿಕೊಳ್ಳುತ್ತಾರೆ ಎಂದು ಪಾಕಿಸ್ತಾನದ ಕ್ರಿಕೆಟ್ ಮಂಡಳಿ ಅಧ್ಯಕ್ಷ ರಮೀಜ್ ರಾಜಾ ಹೇಳಿದ್ದಾರೆ.
ನ್ಯೂಜಿಲ್ಯಾಂಡ್ ಮತ್ತು ಇಂಗ್ಲೆಂಡ್ ತಂಡಗಳು ಭದ್ರತೆ ಕಾರಣ ನೀಡಿ ಪಾಕ್ ಟೂರ್ನಿಯಿಂದ ಹಿಂದೆ ಸರಿದೆ. ಇದರಿಂದಾಗಿ ಪಾಕ್ ಕ್ರಿಕೆಟ್ ಮಂಡಳಿಗೆ ಭಾರೀ ನಷ್ಟವಾಗಿದ್ದು, ಕಳೆದ ಕೆಲವು ದಿನಗಳಿಂದ ಎರಡೂ ತಂಡಗಳ ವಿರುದ್ಧ ರಮೀಜ್ ರಾಜಾ ವಾಗ್ದಾಳಿ ನಡೆಸುತ್ತಾ ಬಂದಿದ್ದಾರೆ. ಈಗ ಆಸ್ಟ್ರೇಲಿಯಾ ಆಟಗಾರರ ಮೇಲೆ ಅಸಮಾಧಾನ ಹೊರ ಹಾಕಿದ್ದಾರೆ.
ಮಾಧ್ಯಮವೊಂದರ ಜೊತೆಗೆ ಮಾತನಾಡಿದ ರಮೀಜ್ ರಾಜಾ, "ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ಎರಡೂ ತಂಡಗಳು ಪಾಕಿಸ್ತಾನದಲ್ಲಿ ಆಡದೇ ಹೋಗಿದ್ದಾರೆ. ಈ ಕ್ರಿಕೆಟ್ ಮಂಡಳಿಗಳು ಪಾಕಿಸ್ತಾನಕ್ಕೆ ಅನ್ಯಾಯ ಮಾಡಿವೆ. ನ್ಯೂಜಿಲ್ಯಾಂಡ್ ಓಡಿ ಹೋಯಿತು ಮತ್ತು ಇಂಗ್ಲೆಂಡ್ ಅದೇ ದಾರಿಯನ್ನು ಅನುಸರಿಸಿತು. ಅವರಿಬ್ಬರೂ ನಮ್ಮ ವಿರುದ್ಧ ತಪ್ಪು ಮಾಡಿದ್ದಾರೆ" ಎಂದು ಕಿಡಿಕಾರಿದ್ದಾರೆ.
PublicNext
26/09/2021 10:27 am