ಶಾರ್ಜಾ: ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಆಟಗಾರ, ಕನ್ನಡಿಗ ಜಗದೀಶ ಸುಚಿತ್ ಗಾಳಿಯಲ್ಲಿ ಹಾರಿ ಎಡಗೈಯಲ್ಲಿ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಗಮನ ಸೆಳೆದಿದ್ದಾರೆ.
ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆದಿದ್ದರೂ ಬದಲಿ ಆಟಗಾರನಾಗಿ ಫೀಲ್ಡಿಂಗ್‌ಗಾಗಿ ಮೈದಾನಕ್ಕಿಳಿದ ಸುಚಿತ್, ಜೇಸನ್ ಹೋಲ್ಡರ್ ದಾಳಿಯಲ್ಲಿ ಗಾಳಿಯಲ್ಲಿ ಹಾರಿ ಎಡಗೈಯಲ್ಲಿ ಅದ್ಭುತ ಕ್ಯಾಚ್ ಹಿಡಿದರು. ಈ ಮೂಲಕ ಮೋಡಿ ಮಾಡಿದರು. ಪರಿಣಾಮ 13 ರನ್ ಗಳಿಸಿದ ದೀಪಕ್ ಹೂಡಾ ಔಟ್ ಆಗಿ ಪೆವಿಲಿಯನ್‌ನತ್ತ ಹೆಜ್ಜೆ ಹಾಕಬೇಕಾಯಿತು.
ಐಪಿಎಲ್ 14ನೇ ಆವೃತ್ತಿಯ ಭಾಗವಾಗಿ ನಿನ್ನೆ (ಶನಿವಾರ) ನಡೆದ 36ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡವು 7 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿತ್ತು. 126 ರನ್‌ಗಳ ಗುರಿ ಬೆನ್ನಟ್ಟಿದ ಹೈದರಾಬಾದ್ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 120 ರನ್ ಗಳಿಸಲು ಶಕ್ತವಾಯಿತು. ತಂಡದ ಪರ ಮೂರು ವಿಕೆಟ್ ಪಡೆದು ಮಿಂಚಿದ್ದ ಜೇಸನ್ ಹೋಲ್ಡರ್ ಸ್ಫೋಟಕ ಬ್ಯಾಟಿಂಗ್ (47 ರನ್, 29 ಎಸೆತ, 5 ಸಿಕ್ಸರ್) ತೋರಿದರು. ಆದರೆ ಜೇಸನ್ ಹೋಲ್ಡರ್ ಏಕಾಂಗಿ ಹೋರಾಟ ವ್ಯರ್ಥವಾಯಿತು.
PublicNext
26/09/2021 07:29 am