ಶಾರ್ಜಾ: ಶುಕ್ರವಾರ( ನಿನ್ನೆ) ಶಾರ್ಜಾದಲ್ಲಿ ನಡೆದ ಯುಎಇ ಆವೃತ್ತಿಯ ಐಪಿಎಲ್ ಪಂದ್ಯದ ಸಂದರ್ಭ ಪ್ರೇಕ್ಷಕರ ಗುಂಪಿನ ಮಧ್ಯೆ ತುಳುನಾಡಿನ "ಹುಲಿ" ಗಳೂ ಕುಣಿದು ಕುಪ್ಪಳಿಸಿ, ರಾಯಲ್ ಚಾಲೆಂಜರ್ಸ್, ಬೆಂಗಳೂರು ತಂಡಕ್ಕೆ ಪ್ರೋತ್ಸಾಹ- ಬೆಂಬಲ ವ್ಯಕ್ತ ಪಡಿಸಿದ್ದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಆರ್ ಸಿಬಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಈ ಮುಖಾಮುಖಿಯಲ್ಲಿ 'ಕುಡ್ಲದ ಜವನೆರ್ ' ವಿಶೇಷವಾಗಿ ಬೆಂಗಳೂರು ತಂಡದ ಆಟಗಾರರನ್ನು ಹುರಿದುಂಬಿಸುತ್ತಾ, ಜಬರ್ ದಸ್ತಾಗಿ ಹುಲಿ ಕುಣಿತವನ್ನೂ 'ಅರಬ್ ಸ್ಥಾನ' ದಲ್ಲಿ ಪ್ರದರ್ಶಿಸಿದರು.
PublicNext
25/09/2021 04:57 pm