ಶಾರ್ಜಾ: ಕನ್ನಡಿಗ ದೇವದತ್ ಪಡಿಕಲ್, ನಾಯಕ ವಿರಾಟ್ ಕೊಹ್ಲಿ ಅಬ್ಬರದ ಅರ್ಧಶತಕದ ಸಹಾಯದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 157 ರನ್‌ಗಳ ಗುರಿ ನೀಡಿದೆ.
ಐಪಿಎಲ್ 14ನೇ ಆವೃತ್ತಿಯ ಭಾಗವಾಗಿ ನಡೆಯುತ್ತಿರುವ 35ನೇ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಚೆನ್ನೈ ತಂಡವು ಕೊಹ್ಲಿ ಪಡೆಯನ್ನು ಕಟ್ಟಿಹಾಕಲು ಹೆಣಗಾಡಿತು. ಆರ್ ಸಿಬಿ ಮೊದಲ ವಿಕೆಟ್ (ವಿರಾಟ್ ಕೊಹ್ಲಿ 53 ರನ್) ನಷ್ಟಕ್ಕೆ 111 ರನ್ ಗಳಿಸಿತು. ಬಳಿಕ ಇನ್ನಿಂಗ್ಸ್ ಕಟ್ಟುವಲ್ಲಿ ಆರ್ ಸಿಬಿ ವಿಫಲವಾಯಿತು.
ವಿರಾಟ್ ವಿಕೆಟ್ ಬಳಿಕ ಮೈದಾನಕ್ಕಿಳಿದ ಎಬಿ ಡಿವಿಲಿಯರ್ಸ್ 12 ರನ್‌ಗೆ ವಿಕೆಟ್ ಕಳೆದುಕೊಂಡರು. ಈ ಬೆನ್ನಲ್ಲೇ 70 ರನ್ ಗಳಿಸಿದ್ದ ದೇವದತ್ ಪಡಿಕಲ್ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಗ್ಲೇನ್ ಮ್ಯಾಕ್ಸ್ ವೆಲ್ 11 ರನ್, ಟಿಮ್ ಡೇವಿಡ್ 1 ರನ್, ಹರ್ಷಲ್ ಪಟೇಲ್ ರನ್ ಗಳಿಸಿದರು. ಇದರೊಂದಿಗೆ ಕೊಹ್ಲಿ ಪಡೆಯು 6 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿತು.
PublicNext
24/09/2021 09:29 pm