ದುಬೈ: ನಾಯಕ ವಿರಾಟ್ ಕೊಹ್ಲಿ, ಅನುಭವಿ ಎಬಿ ಡಿವಿಲಿಯರ್ಸ್, ಗ್ಲೇನ್ ಮ್ಯಾಕ್ಸ್ ವೆಲ್ ಬ್ಯಾಟಿಂಗ್ ವೈಫಲ್ಯದಿಂದಾಗಿ ಆರ್‌ಸಿಬಿ ತಂಡವು ಕೆಕೆಆರ್‌ಗೆ 93 ರನ್‌ಗಳ ಸಾಧಾರಣ ಗುರಿ ನೀಡಿದೆ.
ಐಪಿಎಲ್ 14ನೇ ಆವೃತ್ತಿಯ ಭಾಗವಾಗಿ ಇಂದು ನಡೆಯುತ್ತಿರುವ 31ನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 19ನೇ ಓವರ್ ಮುಕ್ತಾಯಕ್ಕೆ ಸರ್ವಪತನ ಕಂಡು ಕೇವಲ 92 ರನ್ ಗಳಿಸಲು ಶಕ್ತವಾಯಿತು. ತಂಡದ ಪರ ದೇವದತ್ತ ಪಡಿಕ್ಕಲ್ ಗರಿಷ್ಠ 22 ರನ್ ಗಳಿಸಿದರು. ಉಳಿದಂತೆ ನಾಯಕ ವಿರಾಟ್ ಕೊಹ್ಲಿ 5 ರನ್, ಚೊಚ್ಚಲ ಪಂದ್ಯವನ್ನಾಡುತ್ತಿರುವ ಕೆ.ಎಸ್. ಭರತ್ 16 ರನ್, ಹರ್ಷನ್ ಪಟೇಲ್ 12 ರನ್ ಗಳಿಸಲು ಶಕ್ತರಾದರು.
ಕೆಕೆಆರ್ ಪರ ವರುಣ್ ಚರ್ಕವರ್ತಿ ಹಾಗೂ ಆಂಡ್ರೆ ರಸೆಲ್ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. ಈ ಇಬ್ಬರೂ ಬೌಲರ್‌ಗಳು ತಲಾ ಮೂರು ವಿಕೆಟ್ ಪಡೆದರು. ಲಾಕಿ ಫರ್ಗುಸನ್ 2 ವಿಕೆಟ್ ಹಾಗೂ ಕನ್ನಡಿಗ ಪ್ರಸಿದ್ಧ್ ಕೃಷ್ಣ ಒಂದು ವಿಕೆಟ್ ಕಿತ್ತು ತಂಡಕ್ಕೆ ಆಸರೆಯಾದರು.
PublicNext
20/09/2021 09:19 pm