ನವದೆಹಲಿ: ಟಿ20 ವಿಶ್ವಕಪ್‌ಗೆ ತಮ್ಮ ಆಯ್ಕೆ ಮಾಡದ ಹಿನ್ನೆಲೆಯಲ್ಲಿ ಟೀಂ ಇಂಡಿಯಾದ ಯಜುವೇಂದ್ರ ಚಾಹಲ್ ಅವರು ಆಯ್ಕೆಗಾರರನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಟ್ವೀಟ್ ಮಾಡಿರುವ ಕಾಮೆಂಟೇಟರ್, ಟೀಂ ಇಂಡಿಯಾ ಮಾಜಿ ಆಟಗಾರ ಆಕಾಶ್ ಚೋಪ್ರಾ, 'ಯುಎಇಯಲ್ಲಿ ನಡೆಯಲಿರುವ ಐಪಿಎಲ್ 14ನೇ ಆವೃತ್ತಿಯ ಎರಡನೇ ಇನ್ನಿಂಗ್ಸ್‌ನಲ್ಲಿ ವೇಗದ ಸ್ಪಿನ್ನರ್‌ಗಳು ಪ್ರಾಬಲ್ಯ ಮೆರೆಯಬಹುದು' ಎಂದು ಹೇಳಿದ್ದಾರೆ. ಅದಕ್ಕೆ ಚಾಹಲ್ ರೀಟ್ವೀಟ್ ಮಾಡಿದ್ದು, 'ಬಾಯ್.. ವೇಗವಾಗಿ ಸ್ಪಿನ್ನರ್‌ಗಳಾ? #ಜಸ್ಟ್ ಕಿಡ್ಡಿಂಗ್ ಎಂದು ಕುಟುಕಿದ್ದಾರೆ. ಈ ಮೂಲಕ ಟೀಂ ಇಂಡಿಯಾ ಆಯ್ಕೆ ಸಮಿತಿಯು ತಮ್ಮನ್ನು "ವೇಗದ ಸ್ಪಿನ್ನರ್" ಎಂದು ಬಿಟ್ಟಿರಬಹುದು ಎಂದು ಚಾಹಲ್ ಆರೋಪಕ್ಷವಾಗಿ ವ್ಯಂಗ್ಯವಾಡಿದ್ದಾರೆ.
PublicNext
17/09/2021 04:06 pm